ಮುಳ್ಳೇರಿಯ: ಕೋವಿಡ್ ಮಹಾಮಾರಿಯ ಜೊತೆಗೆ ಡೆಂಗ್ಯೂ ಭೀತಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿರ್ಮೂಲನೆಗೆ ದೇಲಂಪಾಡಿ ಗ್ರಾಮ ಪಂಚಾಯತಿ ಮತ್ತು ಮ್ಯಾಶ್ ಶಿಕ್ಷಕರು ಜಾರಿಗೆ ತರುತ್ತಿರುವ ಆಪರೇಷನ್ ಮಾಸ್ ಹಂಟ್ ಯೋಜನೆ ಜಾರಿಗೆ ಬಂದಿದೆ. ಆಪರೇಷನ್ ಮಾಸ್ ಹಂಟ್ ಸಾಮೂಹಿಕ ಶುಷ್ಕ(ಡ್ರೈ ಡೇ) ದಿನಾಚರಣೆಯಾಗಿದ್ದು, ಇದರಲ್ಲಿ ದೇಲಂಪಾಡಿ ಪಂಚಾಯತಿಯ ಎಲ್ಲಾ ಶಾಲಾ ಮಕ್ಕಳು ಪೋಷಕರ ಸಹಾಯದಿಂದ ತಮ್ಮ ಮನೆ ಮತ್ತು ಸುತ್ತಮುತ್ತಲಿನ ಸೊಳ್ಳೆ ಸಂತಾನೋತ್ಪತ್ತಿ ಸ್ಥಳಗಳನ್ನು ಗುರುತಸಿ ನಾಶಪಡಿಸಲಾಗುತ್ತಿದೆ.ಈ ನಿಟ್ಟಿನ ಚಾಲನಾ ಕಾರ್ಯಕ್ರಮ ಭಾನುವಾರ ನಡೆಯಿತು. ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷೆ ನ್ಯಾಯವಾದಿ ಎ.ಪಿ.ಉಷಾ ಉದ್ಘಾಟಿಸಿದರು.
ಕೋವಿಡ್ ಸಂದರ್ಭ ಆನ್‍ಲೈನ್ ಕಲಿಕೆಗೆ ಸಂಬಂಧಿಸಿದ ಸಕ್ರಿಯ ತರಗತಿ ಮಟ್ಟದ ವಾಟ್ಸಾಪ್ ಗುಂಪುಗಳ ಮೂಲಕ ಶಿಕ್ಷಕರು ಮಕ್ಕಳಿಗೆ ಸೊಳ್ಳೆ ನಿರ್ಮೂಲನೆ ಕುರಿತು ಪಾಠಗಳನ್ನು ನೀಡುತ್ತಿದ್ದಾರೆ. ಪಂಚಾಯಿತಿಯ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹನ್ನೊಂದು ಶಾಲೆಗಳ ಮಕ್ಕಳು, ಪ್ರಾಂಶುಪಾಲರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಶಾಲೆಗಳ ವಿದ್ಯಾರ್ಥಿ ಪೋಲೀಸರು ಮತ್ತು ಕಿರಿಯ ರೆಡ್‍ಕ್ರಾಸ್ ಸದಸ್ಯರು ಸ್ವಚ್ಚಗೊಳಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ವಾಟ್ಸಾಪ್ ಗುಂಪುಗಳಲ್ಲಿ ಚಟುವಟಿಕೆಗಳ ಫೆÇೀಟೋಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದೆ. ಇದರ ಭಾಗವಾಗಿ ಸೆಲ್ಫಿ ಫೆÇೀಟೋ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಪಂಚಾಯಿತಿಯ ವಿವಿಧ ವಾರ್ಡ್‍ಗಳಲ್ಲಿ ಸದಸ್ಯರು, ಮಾಶ್ ಶಿಕ್ಷಕರು ಮತ್ತು ಜನಜಾಗೃತಿ ಸಮಿತಿ ಚಟುವಟಿಕೆಗಳನ್ನು ಮುನ್ನಡೆಸಿದರು. ಇದು ಮುಂದಿನ ವಾರಗಳಲ್ಲಿ ಮುಂದುವರಿಯುತ್ತದೆ. ಪಂಚಾಯತಿ ಕಾರ್ಯದರ್ಶಿ, ವಾರ್ಡ್ ಸದಸ್ಯರು, ಮ್ಯಾಶ್ ಶಿಕ್ಷಕರು, ಆರ್.ಆರ್.ಟಿ. ಸ್ವಯಂಸೇವಕರು ಉಪಸ್ಥಿತರಿದ್ದರು.



