HEALTH TIPS

ವೈಫಲ್ಯ ಪತ್ತೆಗೆ ಸಭೆ ನಡೆಸಲು ನಿರ್ಧರಿಸಿದ ಯುಡಿಎಫ್!

             ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣವಾದ ವೈಫಲ್ಯವನ್ನು ನಿರ್ಣಯಿಸಲು ಯುಡಿಎಫ್ ಒಂದು ದಿನದ ಸಭೆ ಕರೆಯಲು ನಿರ್ಧರಿಸಿದೆ. ಹಾಗೆಂದು ಇದು ಕರುಣಾಜನಕ ಸೋಲು ಅಲ್ಲ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಹೇಳಿದ್ದಾರೆ. ಏತನ್ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಆರ್.ಎಸ್.ಪಿ ನಾಯಕ ಶಿಬು ಬೇಬಿ ಜಾನ್ ಸಭೆಯಿಂದ ದೂರವಿರುತ್ತಾರೆ. ಕೆ ಸುಧಾಕರನ್ ಅವರನ್ನು ಬೆಂಬಲಿಸಿದವರನ್ನು,  ಸುಧಾಕರನ್ ಅವರ ವೈಯಕ್ತಿಕ ಸಿಬ್ಬಂದಿ ಸ್ವತಃ ನಿರ್ಬಂಧಿಸಿದರು. ಇದು ಕೆಪಿಸಿಸಿ ಕೇಂದ್ರ ಕಚೇರಿಯ ಮುಂದೆ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.

                ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸೋಲಿನ ಬಳಿಕ  ಯುಡಿಎಫ್ ಸಮನ್ವಯ ಸಮಿತಿಯ ಮೊದಲ ಸಭೆ ಇದಾಗಿದೆ. ಕಾಂಗ್ರೆಸ್‍ನಲ್ಲಿನ ಸಾಂಸ್ಥಿಕ ಸಮಸ್ಯೆಗಳ ಸೋಲಿನ ಬಗ್ಗೆ ಮೊದಲಿನಿಂದಲೂ ಆರೋಪಿಸಿದ ಲೀಗ್ ಮತ್ತು ಆರ್ ಎಸ್ ಪಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ.  ವೈಫಲ್ಯದ ಬಗ್ಗೆ ವಿವರವಾದ ಚರ್ಚೆ ನಡೆಸಲು ನಿರ್ಧರಿಸಲಾಯಿತು.

                  ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಕೆಪಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ಸಭೆಯಿಂದ ದೂರವಿರುತ್ತಾರೆ. ಮುಲ್ಲಪ್ಪಲ್ಲಿ ಅವರ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರು ಭಾಗವಹಿಸುತ್ತಿಲ್ಲ. ಆರ್ ಎಸ್ ಪಿ ಮುಖಂಡ ಶಿಬು ಬೇಬಿಜೋನ್ ಕೂಡ ಸಭೆಯಲ್ಲಿ ಭಾಗವಹಿಸಲಿಲ್ಲ. ಚವರದ ಪರಾಜಯದ ಕಾರಣ  ಶಿಬು ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವರೆಂದು ಸೂಚನೆಗಳಿವೆ.

                ಇದೇ ವೇಳೆ, ಕೆಪಿಸಿಸಿ ಪ್ರಧಾನ ಕಚೇರಿ ನಾಟಕೀಯ ದೃಶ್ಯಗಳಿಗೆ ವೇದಿಕೆಯಾಯಿತು. ಕೆ ಸುಧಾಕರನ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಮೂವರು ಯುವಕರು ಇಂದಿರಾ ಭವನಕ್ಕೆ ಬಂದರು. ಅಂತಿಮವಾಗಿ, ಅವರು ಕೆ ಸುಧಾಕರನ್ ಅವರ ವೈಯಕ್ತಿಕ ಸಿಬ್ಬಂದಿಯನ್ನು ಕಂಡಾಗ ಅವರು ಜಾರಿಕೊಂಡರು.  ಕೆ ಸುಧಾಕರನ್ ಅವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಡೆಯಲು ಕೆಲವು ನಾಯಕರು ಮಾಡಿದ ತಂತ್ರವೆಂದು ಇದನ್ನು ಗ್ರಹಿಸಲಾಗಿದೆ. ಮುಲ್ಲಪ್ಪಲ್ಲಿ ಅವರ ನಿರ್ಗಮನ ಮತ್ತು ಇಂತಹ ನಾಟಕೀಯ ನಡೆಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನಲ್ಲಿ ಸ್ಫೋಟಗಳಿಗೆ ಕಾರಣವಾಗುತ್ತವೆ ಎಂದೇ ವಿಶ್ಲೇಶಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries