ಮಲಪ್ಪುರಂ: ಕೇರಳ ಏಕೀಕರಣದ ಬಳಿಕ ಮೊದಲ ಬಾರಿಗೆ ನಿರ್ಮಿಸಲಾದ ಕೇಂದ್ರ ಕಾರಾಗೃಹ ಶೀಘ್ರದಲ್ಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ. ಮಲಪ್ಪುರಂನ ತವನೂರಿನಲ್ಲಿ ರಾಜ್ಯವು ತನ್ನದೇ ಆದ ಜೈಲು ಸ್ಥಾಪಿಸಿದೆ. ಕೇರಳದ ಇತರ ಮೂರು ಕೇಂದ್ರ ಕಾರಾಗೃಹಗಳನ್ನು ಏಕೀಕೃತ ಕೇರಳ ರಚನೆಯ ಮೊದಲು ನಿರ್ಮಿಸಲಾಗಿರುವುದಾಗಿದೆ.
ಹೊಸ ಜೈಲಿನ ನಿರ್ಮಾಣವು ಈಗಿರುವ ಕೇಂದ್ರ ಕಾರಾಗೃಹಗಳ ವಿನ್ಯಾಸಕ್ಕಿಂತ ಭಿನ್ನವಾಗಿದೆ.ವಾಚ್ ಟವರ್ ನ್ನು ಬದಿಗಳಲ್ಲಿ ಹೊಂದಿಸಲಾಗಿದೆ. ಇತರ ಮೂರು ಜೈಲುಗಳನ್ನು ಪನೋಕ್ಟಿಕಾನ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಆದರೆ ತವನೂರ್ ಯು ಆಕಾರದಲ್ಲಿದೆ.
32.86 ಕೋಟಿ ರೂ.ವೆಚ್ಚದಲ್ಲಿ ಜೈಲು ನಿರ್ಮಿಸಲಾಗಿದೆ. ಉಳಿದ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ತಿಂಗಳು ಜೈಲು ಉದ್ಘಾಟಿಸಲು ಜೈಲು ಇಲಾಖೆ ಯೋಜಿಸಿದೆ. ಈ ಜೈಲಿನಲ್ಲಿ ಏಕಕಾಲದಲ್ಲಿ 800 ಮಂದಿ ಕೈದಿಗಳಿಗೆ ಅವಕಾಶವಿದೆ. ಜೈಲು ಹೆಚ್ಚಿನ ಭದ್ರತೆಯೊಂದಿಗೆ ನಿರ್ಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ಎಲ್ಲಾ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ. ಜೈಲಿನ ನಿರ್ಮಾಣವು 2013 ರಲ್ಲಿ ಪ್ರಾರಂಭಿಸಲಾಗಿತ್ತು.





