ಕಾಸರಗೋಡು: ಶರಣಬಾಲ್ಯಂ ಯೋಜನೆ ಸಂಬಂಧ ವೆಬಿನಾರ್ ಸೀರೀಸ್ ಆರಂಭಗೊಂಡಿದೆ.
ಬಾಲಕಾರ್ಮಿಕತ, ಬಾಲಭಿಕ್ಷಾಟನೆ, ಬಾಲಶೋಷಣೆ, ಬೀದಿ ಬಾಲ್ಯ ಮೊದಲಾದವುಗಳಿಂದ ವಿಮುಕ್ತ ಕೇರಳ ಎಂಬ ಉದ್ದೇಶಗಳೊಂದಿಗೆ ರಚಿಸಲಾದ ಶರಣಬಾಲ್ಯಂ ಯೋಜನೆಯ ಅಂಗವಾಗಿ ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ "ಬಾಲ ಕೌಮಾರ ಕಾರ್ಮಿಕತನ ನಿಯಂತ್ರಣ ಕಾಯಿದೆ, ಬಾಲ ಕಾರ್ಮಿಕತನ : ನೌಕರಿ ಮಾಲೀಕರು ಗಮನಿಸಬೇಕಾದುದು" ಎಂಬ ವಿಷಯಗಳಲ್ಲಿ ಕಾಸರಗೋಡು ಜಿಲ್ಲೆಯ ನೌಕರಿ ಮಾಲೀಕರಿಗಾಗಿ ನಡೆಸುವ ವೆಬಿನಾರ್ ಸೀರೀಸ್ ಇದಾಗಿದೆ.
ಕಾಸರಗೋಡು ಜಿಲ್ಲೆಯ ವ್ಯಾಪಾರಿ-ಉದ್ಯಮಿಗಳಿಗಾಗಿ ಆನ್ ಲೈನ್ ರೂಪದಲ್ಲಿ ನಡೆಸಿದ ಜಾಗೃತಿ ತರಗತಿಯಲ್ಲಿ ರಾಜ್ಯ ಮಕ್ಕಳ ಹಕ್ಕು ಆಯೋಗ ಸದಸ್ಯೆ ಪಿ.ಪಿ.ಶ್ಯಾಮಲಾದೇವಿ ಉದ್ಘಾಟಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕೇಶವನ್ ಎಂ. ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಂದು ಸಿ.ಎ. ತರಗತಿ ನಡೆಸಿದರು. ವ್ಯಾಪಾರಿ ವ್ಯವಸಾಯಿ ಸಮಿತಿ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶೆರೀಫ್, ಜಿಲ್ಲಾ ಶಿಶು ಸಂರಕ್ಷಣೆ ಕಚೇರಿಯ ಸಾಮಾಜಿಕ ಕಾರ್ಯಕರ್ತರಾದ ಅಶ್ವಿನ್ ಬಿ., ಶೋಭಾ ಎಂ. ಮೊದಲಾದವರು ಉಪಸ್ಥಿತರಿದ್ದರು.


