ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಕನ್ನಡ ವಿಭಾಗದ ಆಯೋಜನೆಯಲ್ಲಿ ಸರಣಿ ಉಪನ್ಯಾಸ 'ಸಾಹಿತ್ಯಯಾನ' ದ ಉದ್ಘಾಟನಾ ಕಾರ್ಯಕ್ರಮ ಹಾಗೂ ಮೊದಲ ಉಪನ್ಯಾಸ ಅವತರಣಿಕೆಯು ಇಂದು ಸಂಜೆ 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ. ಕೇಂದ್ರೀಯ ವಿ.ವಿ. ಯ ರಿಜಿಸ್ಟಾರ್ ಇನ್ ಚಾರ್ಜ್ ಡಾ. ರಾಜೇಂದ್ರ ಪಿಲಾಂಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ಮೋಹನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡುವರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಇಲ್ಲಿನ ಕನ್ನಡ, ಸಂಸ್ಕøತ, ಹಿಂದಿ ಮತ್ತು ಉರ್ದು ವಿಭಾಗದ ಮುಖ್ಯಸ್ಥ À ಡಾ. ಶುಭಾ ಮರವಂತೆ ಅವರು 'ಮಧ್ಯಕಾಲೀನ ಸಾಹಿತ್ಯ ಸಂದರ್ಭ: ವಚನ ಮತ್ತು ಕೀರ್ತನೆ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಯೋಜಕ ಮಹೇಶ್ ಎಂ ವಿನಂತಿಸಿಕೊಂಡಿದ್ದಾರೆ. ಗೂಗಲ್ ಮೀಟ್ ಕೊಂಡಿ: https://meet.google.com/uco-fvui-ufm





