ಮಲಪ್ಪುರಂ: ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿರುವ ಮಲಪ್ಪುರಂ ಜಿಲ್ಲೆಯಲ್ಲಿ ಕುದುರೆಯೇರಿ ಸಾರ್ವಜನಿಕವಾಗಿ ಹೊರಗೆ ತೆರಳಿದ ಯುವಕನನ್ನು ಪೋಲೀಸರು ಬಂಧಿಸಿದ್ದಾರೆ. ಈ ಘಟನೆ ತಾನೂರಿನಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಪೋಲೀಸ್ ವಾಹನ ತಪಾಸಣೆ ವೇಳೆ ಯುವಕ ಕುದುರೆಯೊಂದಿಗೆ ಅಡ್ಡಾಡುತ್ತಿರುವುದು ಕಂಡುಬಂತು.
ಕುದುರೆಗಾಗಿ ತಾನು ಮನೆಯಿಂದ ಹೊರಬಂದಿರುವುದಾಗಿ ಯುವಕ ವಿವರಣೆ ನೀಡಿದ್ದಾನೆ. ಕುದುರೆ ನಿರಂತರವಾಗಿ ಮನೆಯಲ್ಲಿ ಉಳಿಯಲು ಒಪ್ಪುತ್ತಿಲ್ಲ. ಮತ್ತು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಮನೆಯಿಂದ ಹೊರ ಬರುವುದು ಕುದುರೆಯ ದೃಷ್ಟಿಯಿಂದ
ಅನಿವಾರ್ಯವಾದ್ದರಿಂದ ಈ ರೀತಿ ಮಾಡಬೇಕಾಯಿತೆಂದು ಆತ ಸಮಜಾಯಿಷಿ ನೀಡಿರುವನು. ಬಳಿಕ ಪೋಲೀಸರು ಯುವಕನನ್ನು ಮನೆಗೆ ವಾಪಸ್ ಕಳುಹಿಸಿದರು. ಮನೆಯ ಬಳಿ ಮೋಜು ಮಾಡಿದರೆ ಸಾಕು ಎಂದು ಸೂಚಿಸಲಾಗಿದೆ.







