HEALTH TIPS

ಕೇರಳದಲ್ಲಿ ಈವರೆಗೆ ಕೋವಿಡ್ ಸುಳಿಯದ ಏಕೈಕ ಗ್ರಾ.ಪಂ.: ಕೊರೋನಾ ಹರಡುವಿಕೆ ತೀವ್ರಗತಿಯಲ್ಲಿದ್ದರೂ ಈ ಒಂದು ಗ್ರಾಮ ಪಂಚಾಯತಿಯಲ್ಲಿ ಯಾರೊಬ್ಬರಿಗೂ ಸೋಂಕು ಬಾಧಿಸಿಲ್ಲ!

                    

                ತೊಡುಪುಳ: ರಾಜ್ಯದಲ್ಲಿ ಕೊರೋನಾ ಹರಡುವಿಕೆ ಸರ್ವ ವ್ಯಾಪಕವಾಗಿ ಮುಂದುವರಿಯುತ್ತಿರುವ ಮಧ್ಯೆ ಒಬ್ಬನೇ ಒಬ್ಬ ವ್ಯಕ್ತಿಯೂ ಈವರೆಗೆ ಸೋಂಕುಗೊಳಗಾಗದೆ ಇರುವ ಗ್ರಾ..ಪಂ. ಒಂದುಇ ಕೇರಳದಲ್ಲಿದೆ ಎಂದರೆ ನಂಬುವಿರಾ!? ಅಂತಹದೊಂದು ಪಂಚಾಯತಿ ಎಂದರೆ ಬುಡಕಟ್ಟು ಪಂಚಾಯತಿಯಾಗಿರುವ ಇದಮಲಕ್ಕುಡಿ.  2000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾ.ಪಂನಲ್ಲಿ ಇದೀಗ  ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಲಸಿಕೆ ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.



                ಕಾಡುಗಳಿಂದ ಸುತ್ತುವರೆದಿರುವ ಇಡಮಲಕ್ಕುಡಿ ರಾಜ್ಯದ ಏಕೈಕ ಬುಡಕಟ್ಟು ಪಂಚಾಯತ್ ಆಗಿದೆ. ರಾಜ್ಯದಲ್ಲಿ ಕೊರೋನಾ ಹರಡುವಿಕೆ ತೀವ್ರ ಗತಿಯಲ್ಲಿದ್ದರೂ, ಇಲ್ಲಿಯವರೆಗೆ ಒಂದೇ ಒಂದು ಕೊರೋನಾ ಪ್ರಕರಣ ಇಲ್ಲಿ ಕಂಡುಬಂದಿಲ್ಲ. 

            ಇದಮಲಕ್ಕುಡಿ ನಿವಾಸಿಗಳಿಗೆ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಮಹತ್ವದ ಸಂಪರ್ಕವಿಲ್ಲ. ಇಡಮಲಕ್ಕುಡಿಯಲ್ಲಿ 26 ಬಾಡಿಗೆ ಮನೆಯಲ್ಲಿ ವಾಸಿಸುವವರ ಸಹಿತ  2000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಡಮಲಕ್ಕುಡಿಗೆ ಹೋಗುವ ರಸ್ತೆಗಳನ್ನು ಪಂಚಾಯತ್ ಮತ್ತು ಗ್ರಾಮದ ಹಿರಿಯರ ನೇತೃತ್ವದಲ್ಲಿ ಎಚ್ಚರಿಕೆಯಿಂದ ಮುಚ್ಚಲಾಗಿದೆ.  ಪ್ರಸ್ತುತ ಅರಣ್ಯ ಇಲಾಖೆ ಮತ್ತು ಇತರರ ಅನುಮತಿಯಿಲ್ಲದೆ ಇಡಮಲಕ್ಕುಡಿಗೆ ಪ್ರವೇಶಿಸಲು ಸಾಧ್ಯವಿಲ್ಲ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries