ಕಾಸರಗೋಡು: ಹವಾಮಾನ ಇಲಾಖೆ ನೀಡಿರುವ ಸೂಚನೆ ಪ್ರಕಾರ ರಾಜ್ಯದಲ್ಲಿ ಬಿರುಸಿನ ಗಾಳಿಮಳೆ ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ವಿದ್ಯುತ್ ವಲಯ ವಿಭಾಗದಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ವಿದ್ಯುತ್ ಅಪಾಯಗಳು ಸಂಭವಿಸಿದಲ್ಲಿ ಯಾ ಅಪಾಯ ಭೀತಿಯಿದ್ದಲ್ಲಿ ಸಾರ್ವಜನಿಕರು ಎಮರ್ಜೆನ್ಸಿ ನಂಬ್ರ(9496010101), ಟಾಲ್ ಫ್ರೀ ನಂಬ್ರ (1912) ಹಾಗೂ ಕಾಸರಗೋಡು ವಲಯ ಕಚೇರಿ ನಿಯಂತ್ರಣಕೊಠಡಿ ಸಂಖ್ಯೆ (949611431)ಗಳಿಗೆ ಸಂಖ್ಯೆಗಳಿಗೆ ಕರೆಮಾಡುವಂತೆ ಪ್ರಕಟಣೆ ತಿಳಿಸಿದೆ.





