HEALTH TIPS

10 ವರ್ಷಗಳ ಹಿಂದೆ ಜ್ಯೂಸ್‌ ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಸಬ್‌ ಇನ್ ಸ್ಪೆಕ್ಟರ್‌ ಆಗಿ ನೇಮಕ

           ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್‌ 25ರಂದು ವರ್ಕಳ ಪೊಲೀಸ್‌ ಠಾಣೆಗೆ ಸಬ್‌ ಇನ್‌ ಸ್ಪೆಕ್ಟರ್‌ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ.


          ಪೊಲೀಸ್‌ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕಗವಾಗಿರುವುದು ಅದ್ಭುತ ಸಾಧನೆಯೆಂದೇ ಆನಿ ಪರಿಗಣಿಸಿದ್ದಾರೆ ಎಂದು ವರದಿ.

             "10 ವರ್ಷಗಳ ಹಿಂದೆ ವರ್ಕಳದ ಶಿವಗಿರಿಗೆ ಬರುತ್ತಿದ್ದ ಯಾತ್ರಾರ್ಥಿಗಳಿಗೆ ಲೆಮನ್ ಜ್ಯೂಸ್‌, ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದೆನೋ, ಅದೇ ಸ್ಥಳಕ್ಕೆ ಇದೀಗ ಸಬ್‌ ಇನ್ ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದೇನೆ. ನಾನು ಇದಕ್ಕಿಂತ ಉತ್ತಮವಾಗಿ ನನ್ನ ನಿನ್ನೆಗಳೊಂದಿಗೆ ಹೇಗೆ ಸೇಡು ತೀರಿಸಿಕೊಳ್ಳಲಿ?" ಎಂದು ಅವರು ತಮ್ಮ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

           "ಮೊದಲು ನಾನು ಮಸಾಲ ಹುಡಿಗಳು ಹಾಗೂ ಸಾಬೂನುಗಳ ಮಾರಾಟ ಮಾಡುತ್ತಿದ್ದೆ. ಬಳಿಕ ನಾನು ಇನ್ಶೂರೆನ್ಸ್‌ ಏಜೆಂಟ್‌ ಆಗಿ ಕೆಲಸ ಮಾಡಿದೆ. ನಂತರ ಹಲವು ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ನನ್ನ ದ್ವಿಚಕ್ರ ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದೆ. ಹೀಗೆ ಕೆಲಸ ಮಾಡಿಯೇ ನಾನು ಸೋಶಿಯಾಲಜಿಯಲ್ಲಿ ಪದವಿ ಪಡೆದುಕೊಂಡೆ" ಎಂದು ಅವರು ತಮ್ಮ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

          2014ರಲ್ಲಿ ಸಬ್‌ ಇನ್‌ ಸ್ಪೆಕ್ಟರ್‌ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂನ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್ಸೈ ಆಯ್ಕೆ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿಯ ಬಳಿಕ ಇದೀಗ ಟ್ರೈನೀ ಅನ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದಾರೆ.

           ಆನಿಯ ಯಶಸ್ಸನ್ನು ಮನಗಂಡ ಕೇರಳದ ಪ್ರಸಿದ್ಧ ಸಿನಿಮಾ ನಟ ಮೋಹನ್ ಲಾಲ್‌ ಫೇಸ್‌ ಬುಕ್‌ ನಲ್ಲಿ ಅಭಿನಂದಿಸಿದ್ದಾರೆ. " ಮನೋರ್ದಾಢ್ಯದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿದ ಆನಿಗೆ ಅಭಿನಂದನೆಗಳು. ಹಲವರ ಜೀವನದ ಕನಸುಗಳಿಗೆ ತಮ್ಮ ಸಾಧನೆಯು ಮಾದರಿಯಾಗಲಿ" ಎಂದು ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries