ನವದೆಹಲಿ: ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಭಾರತದ ಕೈಗಾರಿಕಾ ಉತ್ಪನ್ನವು ಶೇ. 13.4ರಷ್ಟು ಬೆಳವಣಿಗೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಳೆದ ವರ್ಷದ ಕೊರೊನಾ ಲಾಕ್‌ಡೌನ್ ನಡುವೆಯೂ ಕೈಗಾರಿಕಾ ಕ್ಷೇತ್ರ ಉತ್ತಮ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಹೇಳಿದೆ. 2020ರ ಏಪ್ರಿಲ್‌ನಲ್ಲಿ ಈ ಬೆಳವಣಿಗೆ ಶೇ. 54ರಷ್ಟಿತ್ತು. ಈ ವರ್ಷ, ಇದು ಶೇ. 126.6ರಷ್ಟಕ್ಕೆ ಏರಿದೆ.
ಕೈಗಾರಿಕೆಗಳ ಉತ್ಪನ್ನವಾಗಲೀ, ಕಾರ್ಖಾನೆಗಳ ಉತ್ಪನ್ನವಾಗಲೀ ಎರಡನ್ನೂ ಒಗ್ಗೂಡಿಸಿ ನೋಡಿದಾಗ ಉತ್ಪಾದನಾ ಪ್ರಮಾಣ ಶೇ. 13.4ರಷ್ಟು ಏರಿಕೆಯಾಗಿರುವುದು ಕಂಡುಬರುತ್ತದೆ ಎಂದು ಕೇಂದ್ರ ವಿವರಿಸಿದೆ.





