ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸ್ಪೆಷ್ಯಲ್ ಟ್ರೈಬಲ್ ವಾಕ್ಸಿನೇಷನ್ ಕ್ಯಾಂಪೇನ್ ಜೂ.12ರಂದೂ ನಡೆಯಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್ ತಿಳಿಸಿದರು.
ಟ್ರೈಬಲ್ ಪ್ರಮೋಟರ್ ಅವರ ಮೂಲಕ ಆಯ್ದ 18 ವರ್ಷಕ್ಕಿಂತ ಅಧಿಕ ವಯೋಮಾನದ ಟ್ರೈಬಲ್ ಕಾಲನಿ ನಿವಾಸಿಗಳಿಗೆ ಲಸಿಕೆ ನೀಡಲಾಗುತ್ತದೆ. ಈ ವರೆಗೆ ಮೊದಲ ಡೋಸ್ ವಾಕ್ಸಿನ್ ಸ್ವೀಕರಿಸದೇ ಇರುವ ಕಾಲನಿ ನಿವಾಸಿಗಳು ತಮ್ಮ ವ್ಯಾಪ್ತಿಯ ಟ್ರೈಬಲ್ ಪ್ರಮೋಟರ್ ಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ವಾಕ್ಸಿನ್ ಲಭಿಸುವ ಆರೋಗ್ಯ ಕೇಂದ್ರಗಳು :
ಶನಿವಾರ-12-6-2021-ಕೋವಾಕ್ಸಿನ್
1. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ.
2. ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರ.
3. ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ.
4. ಅಜಾನೂರು ಕುಟುಂಬ ಆರೋಗ್ಯ ಕೇಂದ್ರ.






