ಕಾಸರಗೋಡು: ಅಂತಾರಾಷ್ಟ್ರೀಯ ಬಾಲಕಾರ್ಮಿಕತನ ವಿರುದ್ಧ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಪತ್ರಕರ್ತರಿಗಾಗಿ ವೆಬಿನಾರ್ ಜರುಗಿತು.
ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್, ಜಿಲ್ಲಾ ಕಾನೂನು ಸೇವಾಪ್ರಾಧಿಕಾರ, ಚೈಲ್ಡ್ ಲೈನ್ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಗಳು ಜಂಟಿಯಾಗಿ ಈ ವೆಬಿನಾರ್ ನಡೆಸಿದ್ದುವು. "ಬಾಲಕಾರ್ಮಿಕತನ ನಿಷೇಧ ಮತ್ತು ನಿಯಂತ್ರಣ" ಎಂಬ ವಿಷಯದಲ್ಲಿ ಈ ಆನ್ ಲೈನ್ ಕಾರತ್ಯಕ್ರಮ ನಡೆಯಿತು.
ಡಿ.ಎಲ್.ಎಸ್.ಎ. ಜಿಲ್ಲಾ ಕಾರ್ಯದರ್ಶಿ ಎಂ.ಸುಹೈಬ್ ಉದ್ಘಾಟಿಸಿದರು. ಪಾಲಕ್ಕಾಡ್ ಸಿ.ಡಬ್ಲ್ಯೂ.ಸಿ. ಸದಸ್ಯೆ ನ್ಯಾಯವಾದಿ ಅಪರ್ಣಾ ನಾರಾಯಣಣ್ ಉಪನ್ಯಾಸ ಮಂಡಿಸಿದರು. ಚೈಲ್ಡ್ ಲೈನ್ ಝೋನಲ್ ನಿರ್ದೇಶಕ ಸತೀಶ್ ನಂಬ್ಯಾರ್, ಸಪೆÇೀರ್ಟ್ ಡೈರೆಕ್ಟರ್ ಸುದಾಕರನ್ ತಯ್ಯಿಲ್, ಸೆಂಟರ್ ಜೋಡಿನೇಟರ್ ಉದಯಕುಮಾರ್ ಎಂ., ಸಪೆÇೀರ್ಟ್ ಕೋಡಿನೇಟರ್ ಲಿಷಾ ಕೆ.ವಿ., ಸಿ.ಡಬ್ಲ್ಯೂ. ಸಿ.ಸದಸ್ಯರು, ಪತ್ರಕರ್ತರು ಮೊದಲಾದವರು ಭಾಗವಹಿಸಿದ್ದರು.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಂದು ಸಿ.ಎ. ಸ್ವಾಗತಿಸಿದರು. ಚೈಲ್ಡ್ ಲೈನ್ ಜಿಲ್ಲಾ ಸಂಚಾಲಕ ಅನೀಷ್ ಜೋಸ್ ವಂದಿಸಿದರು.





