HEALTH TIPS

ರೈಲ್ವೆಗೆ 25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆಗೆ ಸಂಪುಟ ಅನುಮೋದನೆ

            ನವದೆಹಲಿ: ಭಾರತೀಯ ರೈಲ್ವೆಗೆ 25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.


            ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಲಿ ಎಂದು ಅವರು ಹೇಳಿದ್ದಾರೆ. ರೈಲ್ವೆಗೆ ಸ್ಪೆಕ್ಟ್ರಂ ಹಂಚಿಕೆ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 

             ರೈಲ್ವೆಯು ಸದ್ಯ ಸಂವಹನಕ್ಕಾಗಿ ಆಪ್ಟಿಕಲ್ ಕೇಬಲ್ ನೆಟ್‌ವರ್ಕ್‌ ಅವಲಂಬಿಸಿದೆ. ಹೊಸ ಸ್ಪೆಕ್ಟ್ರಂ ಹಂಚಿಕೆಯಿಂದ ರಿಯಲ್‌ ಟೈಮ್‌ ಆಧಾರದಲ್ಲಿ ಹೈಸ್ಪೀಡ್‌ ರೇಡಿಯೊ ಬಳಸಲು ರೈಲ್ವೆಗೆ ಅನುಕೂಲವಾಗಲಿದೆ.

            ರೈಲ್ವೆಯ ಸಂವಹನ ಮತ್ತು ಸಿಗ್ನಲಿಂಗ್ ಜಾಲಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದೂ ಸಚಿವರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries