ತಿರುವನಂತಪುರ: ಅನಧಿಕೃತವಾಗಿ ಸೇವೆಯಿಂದ ವರ್ಷಗಳಿಂದ ಗೈರುಹಾಜರಾಗಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ 28 ವೈದ್ಯರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಪದೇ ಪದೇ ಅವಕಾಶ ನೀಡಿದರೂ ಸೇವೆಗೆ ಹಾಜರಾಗದ ಕಾರಣ ಸರ್ಕಾರ ಕಠಿಣ ಕ್ರಮ ಕೈಗೊಂಡಿತು.
ಕಾನೂನುಬಾಹಿರವಾಗಿ ಸೇವೆಗೆ ಗೈರುಹಾಜರಾದವರು ಆದಷ್ಟು ಬೇಗ ಮತ್ತೆ ಸೇವೆಗೆ ಪ್ರವೇಶಿಸಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೋರಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯ ನಿರಂತರ ಹೋರಾಟದಲ್ಲಿದೆ. ಆರೋಗ್ಯ ಕಾರ್ಯಕರ್ತರಿಗೆ ಇದು ಅತ್ಯಂತ ತುರ್ತು ಸಮಯ. ಈ ಪರಿಸ್ಥಿತಿಯಲ್ಲಿ ಗೈರುಹಾಜರಾಗಿರುವ ಎಲ್ಲ ಆರೋಗ್ಯ ಕಾರ್ಯಕರ್ತರು ಕೂಡಲೇ ಸೇವೆಗೆ ಸೇರಬೇಕು ಎಂದು ಸಚಿವರು ಒತ್ತಾಯಿಸಿರುವರು.





