HEALTH TIPS

ಕೋವಿಡ್‌ ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್ ವಿವರ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

              ನವದೆಹಲಿ: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನೀವು ವಿದೇಶ ಪ್ರಯಾಣ ಮಾಡುವುದಾದರೆ ಈ ಮಾಹಿತಿ ಓದಲೇ ಬೇಕಾಗಿದೆ. ಕೋವಿನ್ ಈಗ ತನ್ನ ಬಳಕೆದಾರರಿಗೆ ತಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಲಿಂಕ್‌ ಮಾಡಲು ಅವಕಾಶ ನೀಡಿದೆ. ಕೋವಿನ್ ಲಸಿಕೆ ಪ್ರಮಾಣಪತ್ರಗಳನ್ನು ಪ್ರಯಾಣದ ಸಮಯದಲ್ಲಿ ಬಳಸಲಾಗುವ ಹಿನ್ನೆಲೆ ಜನರಿಗೆ ಇದು ಸಹಾಯ ಮಾಡಲಿದೆ.


        ''ಈಗ ನೀವು ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ನಿಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ಲಿಂಕ್‌ ಮಾಡಬಹುದು,'' ಎಂದು ಆರೋಗ್ಯ ಸೇತು ಅಪ್ಲಿಕೇಶನ್‌ನ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

      ಈ ತಿಂಗಳ ಆರಂಭದಲ್ಲಿ, ಕೇಂದ್ರವು ಕೋವಿಡ್ -19 ಲಸಿಕೆಗಾಗಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರಂತೆ ಶಿಕ್ಷಣ, ಉದ್ಯೋಗಗಳಿಗಾಗಿ ವಿದೇಶಕ್ಕೆ ಪ್ರಯಾಣಿಸುವವರು ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ರವಾಸ ಮಾಡುವವರು ಪಾಸ್‌ಪೋರ್ಟ್‌ಗೆ ಲಿಂಕ್ ಮಾಡಲಾದ ಲಸಿಕೆ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿದೆ. ಹಾಗಾದರೆ ಪಾಸ್‌ಪೋರ್ಟ್ ಅನ್ನು ಲಸಿಕೆ ಪ್ರಮಾಣಪತ್ರಕ್ಕೆ                                  ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ ಮುಂದೆ ಓದಿ.

        ಪಾಸ್‌ಪೋರ್ಟ್ ಅನ್ನು ಲಸಿಕೆ ಪ್ರಮಾಣಪತ್ರಕ್ಕೆ ಲಿಂಕ್‌ ಮಾಡಲು ನೀವು ಮಾಡಬೇಕಾದದ್ದು

- ಕೋವಿನ್‌ನ ಅಧಿಕೃತ ಪೋರ್ಟಲ್‌ಗೆ ಮೊದಲು ಭೇಟಿ ನೀಡಿ. www.cowin.gov.in.

- 'Raise an issue' ಆಯ್ಕೆಯನ್ನು ಕ್ಲಿಕ್ ಮಾಡಿ

- ನಂತರ 'Passport' ಆಯ್ಕೆಯ ಮೇಲೆ ಕ್ಲಿಕ್ ಮಾಡಿ,

- ಬಳಿಕ ಡ್ರಾಪ್-ಡೌನ್ ಮೆನುವಿನಲ್ಲಿ ನೀವು ಯಾರ ಪ್ರಮಾಣಪತ್ರವನ್ನು ಲಿಂಕ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ

- ನಂತರ ನಿಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು submit ಮಾಡಿ

ಎಲ್ಲಾ ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲಿದೆ ಈ ಎರಡು ಲಸಿಕೆ

ಇನ್ನು ಲಸಿಕೆ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ನಡುವೆ ವಿವರಗಳ ಹೊಂದಾಣಿಕೆ ಇಲ್ಲದಿದ್ದರೆ, ವಿವರವನ್ನು ತಿದ್ದುವ ಅವಕಾಶ ಕೂಡಾ ನೀಡಲಾಗಿದೆ.

       ವೈಯಕ್ತಿಕ ವಿವರಗಳನ್ನು ಹೇಗೆ ತಿದ್ದುಪಡಿ ಮಾಡುವುದು?

- ಕೋವಿನ್‌ನ ಅಧಿಕೃತ ಪೋರ್ಟಲ್‌ಗೆ ಮೊದಲು ಭೇಟಿ ನೀಡಿ. www.cowin.gov.in.

- 'Raise an issue' ಆಯ್ಕೆಯನ್ನು ಕ್ಲಿಕ್ ಮಾಡಿ

- ನಂತರ 'Correction in certificate' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

- ಬಳಿಕ ಡ್ರಾಪ್-ಡೌನ್ ಮೆನುವಿನಿಂದ ನೀವು ಯಾರ ವಿವರಗಳನ್ನು ಬದಲಾಯಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ

- ನಂತರ ನೀವು ತಿದ್ದುಪಡಿ ಮಾಡಬೇಕಾದ ಆಯ್ಕೆಗಳನ್ನು ಆರಿಸಿ, ವಿವರಗಳನ್ನು ತಿದ್ದುಪಡಿ ಮಾಡಿ

- ಬಳಿಕ submit ಆಯ್ಕೆ ಕ್ಲಿಕ್‌ ಮಾಡಿ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries