ಕಾಸರಗೋಡು: ಬಂಗಾಳ ಆಳಸಮುದ್ರದಲ್ಲಿ ವಾಯುಭಾರಕುಸಿತದ ಪರಿಣಾಮ ಕೇರಳದಲ್ಲಿ ಜೂನ್ 11ರಿಂದ 15ರ ವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ
ಮುನ್ನೆಚ್ಚರಿಕೆ ನೀಡಿದೆ. ಕಾಸರಗೋಡು ಸೇರಿದಂತೆ ಕೇರಳದ ಕೆಲವೊಂದು ಜಿಲ್ಲೆಗಳಲ್ಲಿ 11ರಿಂದ ಬಿರುಸಿನ ಮಳೆಯಾಗಲಿದೆ. ಈ ಕಾಲಾವಧಿಯಲ್ಲಿ ಸಮುದ್ರದಲ್ಲಿ 2.5ರಿಂದ 3.2ಮೀ. ಎತ್ತರದ ವರೆಗೂ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಕರಾವಳಿಯಲ್ಲಿ ವಾಸಿಸುತ್ತಿರುವರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆಯೂ ಕಾಸರಗೋಡು ಜಿಲ್ಲಾ ಮೀನುಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.



