ಕಾಸರಗೋಡು: ನಬಾರ್ಡ್‍ನ ಆರ್.ಐ.ಡಿ. ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ಪಾಲಾಯಿ ವಳವ್ ರೆಗ್ಯುಲೇಟರ್ ಕಂ ಬ್ರಿಜ್ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ ಶಟರ್ ಗಳ ಸಾಮಥ್ರ್ಯ ಪರಿಶೋಧನೆ ನಡೆಸುವ ನಿಟ್ಟಿನಲ್ಲಿ ಟ್ರಯಲ್ ರನ್ ಜೂ.11 ಮತ್ತು 12ರಂದು ನಡೆಸಲಿದೆ.
ಶಟರ್‍ನ ಮೇಲ್ಭಾಗ ಮತ್ತು ಕೆಳಗಡೆಯ ಸ್ತರಗಳಲ್ಲಿ ವಾಸಿಸುತ್ತಿರುವ ಮಂದಿ ಮತ್ತು ಈ ವಲಯದ ಮೀನುಗಾರರು ಟ್ರಯಲ್ ದಿನಗಳಂದು ಜಾಗ್ರತೆ ಪಾಸುವಂತೆ ನೀರಾವರಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ಪಿ.ರಮೇಶನ್ ತಿಳಿಸಿದರು. ಟ್ರಯಲ್ ರನ್ ವೇಳೆ ರೆಗ್ಯುಲೇಟರ್ ಕಂ ಬ್ರಿಜ್ ನ ಎಲ್ಲ ರೆಗ್ಯುಲೇಟಿಂಗ್ ಶಟರ್ ಗಳನ್ನು ಮುಚ್ಚಿ,ಜಲಸಂಗ್ರಹ ಪೂರ್ಣಗೊಂಡ ನಂತರ ತೆರೆದು ಬಿಡಲಾಗುವುದು. ನೀರು ಸಂಗ್ರಹ ನಡೆಸುವ ವೇಳೆ ಮೇಲ್ಭಾಗದಲ್ಲಿ ಹಾಗೂ ಶಟರ್ ತೆರೆಯುವ ವೇಳೆ ಕೆಳದಂಡೆಗಳಲ್ಲಿನ ಜಲಮಟ್ಟದ ಹೆಚ್ಚಳಗೊಳ್ಳುವ ಕಾರಣ ಅಪಾಯ ಸಾಧ್ಯತೆಗಳಿರುವುದಾಗಿ ಅವರು ತಿಳಿಸಿದ್ದಾರೆ.



