ಪೆರ್ಲ: ಕಾಸರಗೋಡು ಜಿಲ್ಲಾ ಪಂಚಾಯತ್ ವತಿಯಿಂದ ಕೋವಿಡ್ ಪ್ರತಿರೋಧ ಕಾರ್ಯಕ್ಕಾಗಿ ಪಲ್ಸ್ ಒಕ್ಸಿಮೀಟರ್ ನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಆರೋಗ್ಯ ಕೇಂದ್ರಕ್ಕೆ ವಿತರಿಸಲಾಯಿತು.
ಎಣ್ಮಕಜೆ ಪಂಚಾಯತಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಒಕ್ಸಿ ಮೀಟರ್ ನ್ನು ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ ಅವರು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರಿಗೆ ಹಸ್ತಾಂತರಿಸಿದರು.
ಉಪಾಧ್ಯಕ್ಷೆ ಡಾ.ಜಹನಾಸ್ ಹಂಸಾರ್, ಮೆಡಿಕಲ್ ಆಫಿಸರ್ ದೀಪರಾಜ್,ಹೆಲ್ತ್ ಇನ್ಸ್ ಪೆಕ್ಟರ್ ಸಜಿತ್, ಪಂ.ಕಾರ್ಯದರ್ಶಿ ಬೋಬಿ ಕ್ಷೇವಿಯರ್, ಪಂ.ಸದಸ್ಯೆ ರಮ್ಲಾ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.


