ಕಾಸರಗೋಡು: ಜಿಲ್ಲೆಯಲ್ಲಿ ವಿಶೇಷಚೇತನರಿಗೆ ಮತ್ತು ಹಾಸಿಗೆ ಹಿಡಿದಿರುವ ರೋಗಿಗಳಿಗಾಗಿ ಮನೆಗೆ ತೆರಳಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಶನಿವಾರ ಆರಂಭಗೊಂಡಿತು. ಕಾಸರಗೋಡು ನಗರಸಭೆಯ ಒಂದನೇ ವಾರ್ಡ್ ಚೇರಂಗೈ ಕರಾವಳಿಯ ನಿವಾಸಿ, ಹಾಸಿಗೆ ಹಿಡಿದಿರುವ ರೋಗಿ ಅಬ್ದುಲ್ ರಹೀಂ ಅವರಿಗೆ ಕೋವಾಕ್ಸಿನ್ ಲಸಿಕೆ ನೀಡಿಕೆ ಮೂಲಕ ಈ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಅವರು ವ್ಯಾಕ್ಸಿನೇಷನ್ ಮೊಬೈಲ್‍ಯೂನಿಟ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಷಂಸೀದಾ ಫಿರೋಜ್, ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷ ರುಗಳಾದ ಖಾಲಿದ್, ಅಬ್ಬಾಸ್‍ಬೀಗಂ, ರಜನಿ, ಸಿಯಾನಾ ಹನೀಫ್, ವಾರ್ಡ್ ಸದಸ್ಯ ಮುಸ್ತಾಕ್ ಮೊದಲಾದವರು ಉಪಸ್ಥಿತರಿದ್ದರು.
ಒಂದು ವಾರದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಹಾಸಿಗೆ ಹಿಡಿದಿರುವ ಎಲ್ಲ ರೋಗಿಗಳಿಗೆವಾಕ್ಸಿನೇಷನ್ ನಡೆಸಲಾಗುವುದು. ಹಾಸಿಗೆ ಹಿಡಿದವರು ಮತು ವಿಶೇಷ ಚೇತನತೆಯ ಪರಿಣಾಮ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ತೆರಳಲಾಗದೇ ಇರುವ ಮಂದಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್‍ನುಡಿದರು. ಕಾಸರಗೋಡು ವಾಕ್ಸಿನೇಷನ್ ಮೊಬೈಲ್ ಯೂನಿಟ್ ಗೆ ಕೇರಳ ಸಮಾಜ ಸುರಕ್ಷೆ ಮಿಷನ್ ವಯೋಮಿತ್ರವೈದ್ಯಾಧಿಕಾರಿ ಡಾ.ಆಸಿಯಾ ಷಫೀಕ್ ನೇತೃತ್ವ ನೀಡುತ್ತಿದ್ದಾರೆ.






