HEALTH TIPS

ಮಳೆಗಾಲದಲ್ಲಿ ಹಲಸಿನ ಹಣ್ಣಿನ ಅಪ್ಪಮ್ ಮಾಡಿ ಸವಿಯದೇ ಇದ್ರೆ ಹೇಗೆ?

        ಮಳೆಗಾಲ ಶುರು ಆಗ್ತಾ ಇದೆ. ಈ ಮಾನ್ಸೂನ್ ಜೊತೆಗೆ ಕೆಲವೊಂದಿಷ್ಟು ಸೀಸನಲ್ ಹಣ್ಣುಗಳು, ಅದರ ರೆಸಿಪಿಗಳು ಆರಂಭ ಆಗ್ತಾ ಇದೆ. ಅದ್ರಲ್ಲಿ ಒಂದು ಈ ಹಲಸಿನ ಹಣ್ಣಿನ ಅಪ್ಪಮ್ (ಅಪ್ಪ )ಅಥವಾ ಮುಳ್ಕ. ಕರಾವಳಿ ಹಾಗೂ ಮಲೆನಾಡಿನಲ್ಲಿ ಅತೀ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಅಪ್ಪಮ್ ನ್ನು ಇಷ್ಟ ಪಡದವ್ರೆ ಇಲ್ಲ. ಜೋರಾಗಿ ಸುರಿಯೋ ಮಳೆ ಜೊತೆಗೆ ಸಂಜೆ ಟೈಮಲ್ಲಿ ಬಿಸಿ ಬಿಸಿ ಕಾಫಿ ಜೊತೆ ಗರಿ ಗರಿಯಾದ ಅಪ್ಪಮ್ ತಿನ್ನುತ್ತಿದ್ದರೆ, ಪಾತ್ರೆ ಖಾಲಿ ಆಗಿದ್ದೇ ಗೊತ್ತಾಗೊಲ್ಲ. ಅಂತಹ ಅಪ್ಪಮ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

PREP TIME
10 Mins
COOK TIME
10M
TOTAL TIME
20 Mins

Recipe By: Shreeraksha

Recipe Type: Vegetarian

Serves: 4

INGREDIENTS
  • ಬೇಕಾಗುವ ಪದಾರ್ಥಗಳು :

    ಹಲಸಿನ ಹಣ್ಣು - 4 ಬಿಡಿಸಿದ್ದು

    ಗೋಧಿ ಹಿಟ್ಟು - 1 ಕಪ್

    ರವೆ - 1/3 ಕಪ್

    ಸಕ್ಕರೆ - 1/4 ಕಪ್

    ಉಪ್ಪು - ಪಿಂಚ್

    ಏಲಕ್ಕಿ - 3

    ತುರಿದ ತೆಂಗಿನಕಾಯಿ - 1/4 ಕಪ್

    ಅಡುಗೆ ಸೋಡಾ - ಪಿಂಚ್

    ತುಪ್ಪ - ಹುರಿಯಲು


  • ತಯಾರಿಸುವ ವಿಧಾನ:

    1. ಹಲಸಿನ ಹಣ್ಣಿನ ಬೀಜ ತೆಗೆದು, ಅದನ್ನು ತುಂಡುಮಾಡಿ ಮಿಕ್ಸಿಗೆ ಹಾಕಿ ನೀರು ಹಾಕದೆ ಚೆನ್ನಾಗಿ ರುಬ್ಬಿಕೊಂಡು ಬದಿಗಿರಿಸಿ.

    2. ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ಹಾಕಿ.ಇದಕ್ಕೆ ರವೆ, ಅಡುಗೆ ಸೋಡಾ, ಉಪ್ಪು, ಸಕ್ಕರೆ, ತೆಂಗಿನಕಾಯಿ ಮತ್ತು ಪುಡಿಮಾಡಿದ ಏಲಕ್ಕಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.

    3. ಇದಕ್ಕೆ ಬೇಕಾದ ನೀರಿನೊಂದಿಗೆ ಹಲಸಿನ ಹಣ್ಣಿನ ಮಿಶ್ರಣವನ್ನು ಸೇರಿಸಿ. ದಪ್ಪ ನಯವಾದ ಬ್ಯಾಟರ್ ಆಗುವಂತೆ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

    4. ಅಪ್ಪಮ್ ಮಾಡುವ ಪ್ಯಾನ್ ಗೆ ತುಪ್ಪವನ್ನು ಸವರಿ ಕಾಯಿಸಿ. ಬದಿಗಿಟ್ಟ ಹಿಟ್ಟಿನ ಬ್ಯಾಟರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪ್ಯಾನ್ಗೆ ಸುರಿಯಿರಿ. ಮೀಡಿಯಂ ಫ್ಲೆಮ್ ನಲ್ಲಿ ಬೇಯಿಸಿ, ನಂತರ ನಿಧಾನಕ್ಕೆ ಇನ್ನೊಂದು ಬದಿಗೆ ತಿರುಗಿಸಿ ಬೇಯಿಸಿ.

    5. ಎಲ್ಲಾ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಪ್ಯಾನ್‌ನಿಂದ ತೆಗೆಯಿರಿ.

    6. ಈಗ ರುಚಿ ರುಚಿಯಾದ ಹಲಸಿನ ಹಣ್ಣಿನ ಅಪ್ಪಮ್ ಬಿಸಿ ಬಿಸಿಯಾಗಿ ಸವಿಯಲು ಸಿದ್ಧ.

INSTRUCTIONS
NUTRITIONAL INFORMATION
  • People - 3
  • ಕ್ಯಾಲೋರಿ - 452
  • ಕೊಬ್ಬು - 9.8ಗ್ರಾ
  • ಪ್ರೊಟೀನ್ - 7.4ಗ್ರಾ
  • ಕಾರ್ಬ್ - 90.7ಗ್ರಾ

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries