HEALTH TIPS

ಆಶಾ ಕಾರ್ಯಕರ್ತೆಯರ ಕೋವಿಡ್ ನಿಯಂತ್ರಣದ ಜನಸೇವೆ ಶ್ಲಾಘನೀಯ: ಗೌರವಧನ ಹೆಚ್ಚಿಸಬೇಕು: ಶಾಸಕ ಮ್ಯಾಥ್ಯೂ ಕುಳನಾಡನ್

               ಮುವಾಟ್ಟುಪುಳ: ರಾಜ್ಯದ ಕಳವಳಕಾರಿ ಸವಾಲಾಗಿ ಮಾರ್ಪಟ್ಟ ಕೋವಿಡ್ ನಿಯಂತ್ರಣ ಚಟುವಟಿಕೆಯಲ್ಲಿ ಆಶಾ ಕಾರ್ಯಕರ್ತೆಯರ ಕರ್ತವ್ಯಪರತೆ ಶ್ಲಾಘನೀಯ ಎಂದು ಮುವಾಟ್ಟುಪುಳ ಶಾಸಕ ಡಾ.ಎಸ್.ಎಸ್. ಮ್ಯಾತ್ಯು ಕುಳನಾಡನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ರಾಜ್ಯವು ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವಾಗ ಆಶಾ ಕಾರ್ಯಕರ್ತರ ಚಟುವಟಕೆಗಳು ಮಹತ್ವಪೂರ್ಣವಾದುದು ಎಂದು ಕುಳನಾಡಾನ್ ಹೇಳಿದ್ದಾರೆ.

               ರಾಜ್ಯವು ವಿವಿಧ ಹಂತಗಳಲ್ಲಿ ಕೋವಿಡ್ ವಿರುದ್ದ ಸಮರೋಪಾದಿಯ ಕಾರ್ಯತಂತ್ರಗಳಿಂದ ಗಮನ ಸೆಳೆಯಿತು. ಆದರೆ ರಾಜಕೀಯ ಸಂಘರ್ಷದಲ್ಲಿ ಹೋರಾಡುವುದು ಸಮಯೋಚಿತವಾಗಿದೆ. "ನಾವು ಕಳೆದ ಎರಡು ವರ್ಷಗಳಿಂದ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ, ಆಶಾ ಕಾರ್ಯಕರ್ತರು ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ" ಎಂದು ಮ್ಯಾಥ್ಯೂ ಕುಳನಾಡನ್ ಹೇಳಿರುವರು. ಸಾಮಾನ್ಯ ಮಹಿಳೆಯರು ತೋರಿಸಿದ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ಬಗ್ಗೆ ಆಶ್ಚರ್ಯಚಕಿತರಾದ ಅವರು, ್ತ ಆಶಾ ಕಾರ್ಯಕರ್ತರ ಕರ್ತವ್ಯಪರತೆ ಎಂದು ಕುಳನಾಡನ್ ಮೊನ್ನೆಯ ವಿಧಾನಸಭೆಯಲ್ಲಿ ಮಾತನಾಡಿ ಮಾಹಿತಿ ನೀಡಿದರು.

                 ಆಶಾ ಕಾರ್ಯಕರ್ತರೊಂದಿಗೆ ಮಾತನಾಡಿ ಅವರಿಗೆ ಏನು ಬೇಕು ಎಂದು ವಿಚಾರಿಸಬೇಕು. ಅವರು ಪಿಪಿಇ ಕಿಟ್‍ಗಳು ಮತ್ತು ಕೈಗವಸುಗಳನ್ನು ಕಡ್ಡಾಯ ಧರಿಸುವಂತೆ ಗಮನಿಸಬೇಕು. ಕೋವಿಡ್ ಬಿಕ್ಕಟ್ಟಿನಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡಿದ್ದರೂ, ಅವರು ತಮ್ಮ ಜೀವದ ಹಂಗುತೊರೆದು ಕೋವಿಡ್ ರೋಗಿಗಳ ಆರೈಕೆಗೆ ಮುನ್ನುಗ್ಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದೆ ಕೆಲಸ ಮಾಡುತ್ತಿದ್ದಾರೆ.

           ಆಶಾ ಕಾರ್ಯಕರ್ತರಿಗೆ ಗೌರವಧನವಾಗಿ ರಾಜ್ಯದಿಂದ 6000 ಮತ್ತು ಕೇಂದ್ರ ಸರ್ಕಾರದಿಂದ 2000 ಲಭಿಸುತ್ತಿದೆ. ಆದರೆ ಅವರು ಮಾಡುವ ಸೇವೆಗೆ ಇದು ದೊಡ್ಡ ವೇತನವೇನೂ ಅಲ್ಲ.  ಆಶಾ ಕಾರ್ಯಕರ್ತೆಯರಿಗೆ ಗೌರವ ಧನವನ್ನು ತುರ್ತು ವಿಷಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮ್ಯಾಥ್ಯೂ ಕುಳನಾಡನ್ ವಿಧಾನಸಭೆಗೆ ತಿಳಿಸಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries