ಕಾಸರಗೋಡು: ಕೋವಿಡ್ 19 ಸಹಿತ ಮಾರಕ ಸಾಂಕ್ರಾಮಿಕ ರೋಗಗಳ ಪ್ರತಿರೋಧ ನಡೆಸುವ ಮತ್ತು ಕೋವಿಡ್ ಮುಂಚೂಣಿ ಹೋರಾಟಗಾರರನ್ನು ಸೃಷ್ಟಿಸುವ ಉದ್ದೇಶದಿಂದ ಮಿನಿಸ್ಟ್ರಿ ಆಫ್ ಸ್ಕಿಲ್ ಡೆವೆಲಪ್ ಮೆಂಟ್ ಆಂಡ್ ಎನ್ ಟ್ರ ಪ್ರನರ್ ಶಿಪ್ ಉದ್ಯೋಗಾರ್ಥಿಗಳನ್ನು ಆಯ್ದು ತರಬೇತಿ ನೀಡಲಿದೆ.
ಜಿಲ್ಲಾಡಳಿತೆ ಮತ್ತು ನ್ಯಾಷನಲ್ ಸ್ಕಿಲ್ ಡೆವೆಲಪ್ ಮೆಂಟ್ ಕಾರ್ಪರೇಷನ್, ಕೇರಳ ಅಕಾಡೆಮಿ ಫಾರ್ ಸ್ಕಿಲ್ ಎಕ್ಸೆಲೆನ್ಸ್ (ಕೆ.ಎ.ಎಸ್.ಇ.) ಯೊಂದಿಗೆ ಸಹಕರಿಸಿ ಈ ಯೋಜನೆಯನ್ನು ಜಾರಿಗೊಳಿಸಲಿದೆ. ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್, ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಂ ಹೆಲ್ತ್ ಏಯ್ಡ್, ಮೆಡಿಕಲ್ ಎಕ್ಯೂಪ್ ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ಎಂಬ ಕೋರ್ಸ್ ಗಳಲ್ಲಿ ತರಬೇತಿ ನೀಡಲಾಗುವುದು. ಆಯ್ಕೆಗೊಂಡವರಿಗೆ ಒಂದು ತಿಂಗಳ ಉಚಿತ ತರಗತಿ , ತರಬೇತಿ ಆಸ್ಪತ್ರೆಗಳಲ್ಲೋ, ಆರೋಗ್ಯ ಕೇಂದ್ರಗಳಲ್ಲೋ 90 ದಿನಗಳ ಕಡ್ಡಾಯ ಆನ್ ಜಾಬ್ ತರಬೇತಿಯೂ ಲಭಿಸಲಿದೆ.
ಮೊದಲ ಹಂತದಲ್ಲಿ "ಹೋಂ ಹೆಲ್ತ್ ಏಯ್ಡ್" ಎಂಬ ಕೋರ್ಸ್ ಮಾತ್ರ ಕಾಸರಗೋಡು ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. 18 ರಿಂದ 35 ರ ನಡುವಿನ ವಯೋಮಾನದ ಹತ್ತನೇ ತರಗತಿ ತೇರ್ಗಡೆಗೊಂಡವರು ಅರ್ಜಿ ಸಲ್ಲಿಸಬಹುದು. ಮೊದಲ ಹಂತದಲ್ಲಿ ಆಯ್ಕೆಗೊಂಡ 80 ಮಂದಿಗೆ ಮಾತ್ರ ತರಬೇತಿ ಲಭಿಸಲಿದೆ.
ಈ ಕೋರ್ಸ್ ಗೆ (ಹೋಂ ಹೆಲ್ತ್ ಏಯ್ಡ್-ನಸಿರ್ಂಗ್ ಅಸಿಸ್ಟೆಂಟ್) ಸೇರ್ಪಡೆಗೊಳ್ಳಲು ಆಸಕ್ತರು http://forms.gle/Q6NfFQKUYNwysD6a6 ಎಂಬ ಲಿಂಕ್ ಪ್ರವೇಶಿಸಿ ಗೂಗಲ್ ಫಾರಂ ಭರ್ತಿಗೊಳಿಸಿ ಜೂ.15ರ ಮುಂಚಿತವಾಗಿ ಸಲ್ಲಿಸಬೇಕು.
ಹೆಚ್ಚುವರಿ ಮಾಹಿತಿಗಾಗಿ ಕಾಸರಗೋಡು ಹಳೆಬಸ್ ನಿಲ್ದಾಣ ಬಳಿಯ ನಾಲಪ್ಪಾಡನ್ ಯು.ಕೆ.ಮಾಲ್ ನಲ್ಲಿ ಚಟುವಟಿಕೆ ನಡೆಸುವ ಪ್ರಧಾನಮಂತ್ರಿ ಕೌಶಲ್ ಕೇಂದ್ರವನ್ನು (ದೂರವಾಣಿ ಸಂಖ್ಯೆ: 8281282368. ಈ-ಮೇಲ್ :(:skilcoordinator.ksd@gmail.com)ಸಂಪರ್ಕಿಸಬಹುದು.
........




