ತಿರುವನಂತಪುರ: ಕೊರೋನಾ ಲಸಿಕೆ ಕೇರಳಕ್ಕೆ ಪೂರೈಸಲು ರಾಜ್ಯ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರ್‍ನಲ್ಲಿ ಭಾಗವಹಿಸಲು ಯಾರೂ ಬಂದಿಲ್ಲ ಎಮದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಮೂರು ವಿದೇಶಿ ಸಂಸ್ಥೆಗಳು ಅನುಮೋದಿಸಿದ ವಿದೇಶಿ ಲಸಿಕೆಗಳನ್ನು ರಾಜ್ಯಕ್ಕೆ ಪೂರೈಸಲು ಟೆಂಡರ್ ಕರೆಯಲಾಗಿತ್ತು. ಜಾಗತಿಕ ಟೆಂಡರ್ ನ್ನು ಕೇರಳ ವೈದ್ಯಕೀಯ ಸೇವಾ ನಿಗಮ ಕರೆದಿತ್ತು.
ಹೆಚ್ಚಿನ ಲಸಿಕೆಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಬಿಡ್ ನ್ನು ಗುರುವಾರ ತೆರೆಯಲಾಯಿತು. ಆದರೆ ಯಾರೂ ಆಸಕ್ತಿ ತೋರಿಸಿ ಟೆಂಡರ್ ಸಲ್ಲಿಸಲಿಲ್ಲ. ಇತರ ರಾಜ್ಯಗಳು ಇದೇ ರೀತಿ ಲಸಿಕೆಗಾಗಿ ಜಾಗತಿಕ ಟೆಂಡರ್ ಕೋರಿವೆ. ಆದರೆ ಯಾರೂ ಮುಂಬರುತ್ತಿಲ್ಲ ಎನ್ನಲಾಗಿದೆ.






