HEALTH TIPS

ಕೊರೊನಾ ಸೋಂಕಿತರ 'ಮಧುಮೇಹ ನಿರ್ವಹಣೆ'ಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

           ನವದೆಹಲಿಅನಿಯಂತ್ರಿತ ಮಧುಮೇಹ ಹೊಂದಿರುವ ಕೋವಿಡ್-19 ರೋಗಿಗಳಲ್ಲಿ ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೊರೊನಾ ಸೋಂಕಿತರ 'ಮಧುಮೇಹ ನಿರ್ವಹಣೆ'ಗೆ ಮಾರ್ಗಸೂಚಿ ಪ್ರಕಟಿಸಿದೆ.


          ಕೋವಿಡ್-19 ರೋಗಿಗಳಲ್ಲಿ ಮಧುಮೇಹದ ರೋಗನಿರ್ಣಯ ಮತ್ತು ನಿರ್ವಹಣೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ವೈದ್ಯಕೀಯ ಮಾರ್ಗದರ್ಶನ ಬಿಡುಗಡೆ ಮಾಡಿದ್ದು, ಮಧುಮೇಹದಿಂದ ಬಳಲುತ್ತಿರುವ ಜನರು ಹೈಪರ್ ಗ್ಲೈಸೀಮಿಯಾ ಅಥವಾ ಅಧಿಕ ರಕ್ತದ ಗ್ಲುಕೋಸ್ʼನಿಂದ ಬಾಧಿತರಾಗಬಹುದು, ಇದು ಅವರನ್ನ ಕಪ್ಪು ಶಿಲೀಂಧ್ರದ ಮತ್ತಷ್ಟು ಅಪಾಯಕ್ಕೆ ತಳ್ಳಬಹುದು. ಆದ್ದರಿಂದ ಮಧುಮೇಹದ ಇತಿಹಾಸ ಹೊಂದಿರುವ ಕೋವಿಡ್-19 ರೋಗಿಗಳ ಮೇಲೆ ತೀವ್ರ ನಿಗಾ ಇಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಿದೆ.

       'ಹೈಪರ್ ಗ್ಲೈಸೀಮಿಯಾ ಪ್ರವೇಶದ ಸಮಯದಲ್ಲಿ ಪ್ರತಿಯೊಬ್ಬ ರೋಗಿಯನ್ನ ಕನಿಷ್ಠ ಎರಡು ರಕ್ತ ಗ್ಲುಕೋಸ್ ಮೌಲ್ಯಗಳೊಂದಿಗೆ (1 ಪೂರ್ವ-ಊಟ ಮತ್ತು 1 ಊಟದ ನಂತರದ ಮೌಲ್ಯ) ಗ್ಲುಕೋಮೀಟರ್ʼನಿಂದ ತಪಾಸಣೆ ಮಾಡಬೇಕು. ಮಧುಮೇಹ ಹೊಂದಿರುವ ಪ್ರತಿಯೊಬ್ಬ ರೋಗಿಯು ಮಧುಮೇಹದ ಆಹಾರದ ಡಯಟ್ ನಲ್ಲಿರಬೇಕು. ದಯವಿಟ್ಟು ರೋಗಿಯ ಡಯಟ್ ಚಾರ್ಟ್ ನಲ್ಲಿ ಸಲಹೆ ನೀಡಿದ ಸಮಯ ಮತ್ತು ಪ್ರಮಾಣವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ ವೈದ್ಯರು ರೋಗಿಗಳು ಈ ಡಯಟ್ ಚಾರ್ಟ್ ಅನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದಾರೆಯೇ ಅನ್ನೋದನ್ನ ಖಚಿತಪಡಿಸಿಕೊಳ್ಳಿ' ಎಂದು ಆರೋಗ್ಯ ಸಚಿವಾಲಯ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

         ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸೌಲಭ್ಯಗಳು ಮತ್ತು ವೈದ್ಯರ ವಿವರವಾದ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
           ಮೇ 24ರ ಮಾಹಿತಿಯಂತೆ, ಸುಮಾರು 5,424 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೇಶದ 18 ವಿವಿಧ ರಾಜ್ಯಗಳಲ್ಲಿ ಕಂಡುಬಂದಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ಇದರಲ್ಲಿ 4,556 ಪ್ರಕರಣಗಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡುಬಂದದ್ದಾಗಿದೆ. ಉಳಿದವು ಕೊವಿಡ್ ಹೊರತಾದ ಆದರೆ, ಶೇ. 55ರಷ್ಟು ಸಕ್ಕರೆ ಕಾಯಿಲೆ ಇರುವವರಲ್ಲಿ ಕಂಡುಬಂದ ಪ್ರಕರಣಗಳು ಎಂದು ತಿಳಿದುಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries