ಕಾಸರಗೋಡು: ಪಿಲಿಕುಂಜೆ ಸ್ಪೋಟ್ರ್ಸ್-ಆಟ್ರ್ಸ್ ಕ್ಲಬ್ಬಿನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಕ್ಲಬ್ಬಿನ ಅಧ್ಯಕ್ಷ ಪ್ರಮೋದ್ ಪಿಲಿಕುಂಜೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ. ಸದಸ್ಯೆ ವಿಮಲ ಶ್ರೀಧರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಾರ್ಡಿನ ಮಾಜಿ ಅಧ್ಯಕ್ಷರುಗಳಾದ ಶರತ್ ಕುಮಾರ್ ಮತ್ತು ಸುಜೀತ್ ಹಾಗೂ ಸವಾಕ್ ಸಂಘಟನೆಯ ಕಾಸರಗೋಡು ಬ್ಲಾಕ್ ಅಧ್ಯಕ್ಷ ದಯಾ ಪಿಲಿಕುಂಜೆ ಉಪಸ್ಥಿತರಿದ್ದರು. ಕ್ಲಬ್ಬಿನ ಗೌರವಾಧ್ಯಕ್ಷ ವಾಮನ ಮುಳ್ಳಂಗೋಡು,ಕಾರ್ಯದರ್ಶಿ ನರೇಂದ್ರ ಪಿಲಿಕುಂಜೆ,ಸದಸ್ಯರಾದ ವರದರಾಜ್,ವಾಮನ,ಹಿತೇಶ್,ಕೃಪಾ ಶಂಕರ,ಧನುಷ್, ದೀಕ್ಷಿತ್,ಅನೀಶ್,ಅಶ್ವಿನ್, ಅಜಿತ್ ಮತ್ತು ಕ್ಲಬ್ಬಿನ ಹಿರಿಯರಾದ ಲಕ್ಷಣ್ ಜಿ ರಾವ್ ಮುಂತಾದವರು ಭಾಗವಹಿಸಿದರು.





