ಬದಿಯಡ್ಕ: ನಬಾರ್ಡ್ ಕೆ.ಎಫ್.ಡಬ್ಲ್ಯು ಸೋಯಿಲ್ ಪ್ರಾಜೆಕ್ಟ್ ನೇತೃತ್ವದಲ್ಲಿ ಸಿ.ಆರ್.ಡಿ ಮತ್ತು ಮುಗು ವಾಟರ್ ಶೆಡ್ ಸಹಕಾರದೊಂದಿಗೆ ಬಿದಿರು ಮರ ಬೆಳೆಸುವ ಯೋಜನೆಯನ್ವಯ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಮಲ್ಲಡ್ಕದಲ್ಲಿ ಬಿದಿರು ಸಸಿ ನೆಡುವ ಚಟುವಟಿಕೆಗೆ ವಿಶ್ವ ಪರಿಸರ ದಿನದಂದು ನಡೆಯಿತು.
ಮುಗು ವಾಟರ್ ಶೆಡ್ ಘಟಕದ ಅಧ್ಯಕ್ಷ ಜಯದೇವ ಖಂಡಿಗೆ ಅ|ಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಕೆ.ಎಂ. ಉದ್ಘಾಟಿಸಿದರು. ಬದಿಯಡ್ಕ ಕೃಷಿ ಭವನದ ಅಧಿಕಾರಿ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ.ಸದಸ್ಯೆ ಸ್ವಪ್ನ, ಸಿಆರ್ ಡಿ ಯೋಜನಾ ಪ್ರಬಂಧಕ ಡಿ.ಕೆ.ನಾರಾಯಣ ನಾಯರ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ನಿವೇದಿತ ಸೇವಾ ಸಮಿತಿಯ ಗಣೇಶ ಕೃಷ್ಣ ಅಳಕೆ ಉಪಸ್ಥಿತರಿದ್ದು ಶುಭಾಶಂಸನೆಗೈದರು. ವೀರೇಶ್ವರ ಭಟ್ ಪ್ರಾರ್ಥನಾ ಗೀತೆ ಹಾಡಿದರು. ಮುಗು ವಾಟರ್ ಶೆಡ್ ಕಾರ್ಯದರ್ಶಿ ಶಿವಪ್ರಸಾದ್ ಎಚ್.ಎಂ. ಸ್ವಾಗತಿಸಿ, ವಂದಿಸಿದರು. ಬಳಿಕ ಬಯಲು ಪೂರ್ತಿ ಬಿದಿರು ಸಸಿಗಳನ್ನು ನೆಡಲಾಯಿತು.






