ಕಾಸರಗೋಡು: ಕೋವಿಡ್ ಪೂರ್ವದ ಕಾಲಘಟ್ಟಕ್ಕಿಂತಲೂ ಮಿಗಿಲಾದ ಬೃಹತ್ ಮಟ್ಟದಲ್ಲಿ ಕೋವಿಡ್ ಕಾಲದಲ್ಲಿ ವ್ಯಾಪಕ ಪ್ರಮಾಣದ ಹಣದ ವಂಚನೆ ಪ್ರಕರಣಗಳು ವರದಿಯಾಗಿ ತೀವ್ರ ಕಳವಳ ಸೃಷ್ಟಿದೆ.
ಕೋವಿಡ್ ಲಾಕ್ ಡೌನ್ ಸಂದರ್ಭ ಜನರು ಮನೆಯಲ್ಲೇ ಇರುವುದರಿಂದ ಇಂತಹ ಸಂದರ್ಭವನ್ನೇ ಗುರಿಯಾಗಿಸಿ "ಮನೆಯಿಂದಲೇ ಹಣ ಗಳಿಸಿ" ಎಂಬ ಎರೆಹುಳ ತೋರಿಸಿ ಬೃಹತ್ ಪ್ರಮಾಣದಲ್ಲಿ ಜನರನ್ನು ಚೈನ್ ವ್ಯವಸ್ಥೆಯಡಿಯಲ್ಲಿ ವಂಚಿಸುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಪೇಸ್ ಬುಕ್ ಖಾತೆಗಳ ನಕಲಿ ಖಾತೆ ತೆರೆದು ತುರ್ತು ಹಣದ ಬೇಡಿಕೆಯ ಮೂಲಕ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಝಾ ಲೈಫ್ ಸ್ಟೈಲ್ ಡಾಟ್ ಕಾಂ ಎಂಬ ಸಂಸ್ಥೆಯೊಂದು ಅರ್ಧ ತಾಸಲ್ಲಿ 60 ಜಾಹೀರಾತು ವೀಕ್ಷಿಸಿದರೆ ದಿನಕ್ಕೆ 240 ರೂ. ಸಂಣಪಾದಿಸಬಹುದೆಂದು ಬೃಹತ್ ಜಾಲ ನಿರ್ಮಿಸಿ ಕೋಟ್ಯಂತರ ರೂ ವಂಚಿಸಿದ ಘಟನೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಕೆ.ವಿ ಜಾನಿ ಎಂಬವನನ್ನು ಬೆಂಗಳೂರಲ್ಲಿ ಪೋಲೀಸರು ಬಂಧಿಸಿದ್ದರು. ಕಾಸರಗೋಡು ಸಹಿತ ಕೇರಳದಾದ್ಯಂತ ಸಾವಿರಾರು ಜನರು ವಂಚನೆಗೊಳಗಾಗಿದ್ದು ತಲೆಗೆ ಕೈಹೊತ್ತು ಕುಳಿತಿದ್ದಾರೆ.
ಇನ್ನೊಂದು ಜಾಲವಾದ ಸೋಲಾರ್ ಎನರ್ಜಿ ಸಿಸ್ಟಂ ಎಂಬ ಗುಜರಾತಿನ ಕಂಪೆನಿಯೆಂದು ಬಿಂಬಿಸಿ ಕಾಸರಗೋಡಿನ ಸಾವಿರಾರು ಜನರು ವಂಚನೆಗೊಳಗಾಗಿದ್ದಾರೆ. ವಿಶೇಷವೆಂದರೆ ಈ ಕಂಪೆನಿಯ ಪ್ರಚಾರ ಲೋಗೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪೋಟೋ ಬಳಸಲಾಗಿತ್ತು. ಬಹುಷಃ ಸರ್ಕಾರದ ಯೋಜನೆ ಎಮದು ಬಿಂಬಿಸಿ ಜನರಿಂದ ಬೃಹತ್ ಮೊತ್ತದ ಹಣ ಕೀಳಲಾಗಿದೆ.
ಇದೀಗ ಗುರುಗಳೇ ಗುರಿ!:
ಅಧ್ಯಾಪಕರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಹಿಸಿ, ಅವರ ಫೇಸ್ ಬುಕ್ ಫ್ರೆಂಡ್ ಲಿಸ್ಟ್ ನಲ್ಲಿರುವ ಅಧ್ಯಾಪಕರು, ಇತರ ವ್ಯಕ್ತಿಗಳಲ್ಲಿ ತುರ್ತು ಹಣಕ್ಕೆ ಬೇಡಿಕೆ ಇರಿಸಿ ವಂಚಿಸುತ್ತಿರುವ ಪ್ರಕರಣಗಳು ವ್ಯಾಪಕವಾಗುತ್ತಿದೆ.
ಫೇಸ್ ಬುಕ್ ಖಾತೆ ಹೊಂದಿರುವ ಗಣ್ಯರ ನಕಲಿ ಖಾತೆ ತೆರೆದು ಅವರ ಪೆÇ್ರಫೈಲ್ ಚಿತ್ರ, ನಾಲ್ಕೈದು ಚಿತ್ರಗಳು, ಹಾಗೂ ವಯುಕ್ತಿಕ ಮಾಹಿತಿಗಳನ್ನು ಅದೇ ರೀತಿ ನಕಲು ಮಾಡಿ ಹೊಸ ಖಾತೆ ಸೃಷ್ಟಿಸಿ, ಗಣ್ಯರ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ಪ್ರೆಂಡ್ ರಿಕ್ವೆಸ್ಟ್ ಕಳಿಸಿ, ಅದನ್ನು ಸ್ವೀಕರಿಸಿದಲ್ಲಿ ಮೆಸೆಂಜರ್ ಮೂಲಕ ತುರ್ತು ಹಣದ ಬೇಡಿಕೆ ಇರಿಸಿ ವಂಚಿಸಲಾಗುತ್ತಿದೆ.
ಈ ರೀತಿ ತಮಗೆ ಬಂದ ಫೇಸ್ ಬುಕ್ ರಿಕ್ವೆಸ್ಟ್ ಅನ್ನು ಅಸಲಿ ಖಾತೆ ಎಂದೇ ಭಾವಿಸಿ ಮೆಸೆಂಜರ್ ನಲ್ಲಿ ಕಳುಹಿಸಿದ ಗೂಗಲ್ ಪೇ, ಫೆÇೀನ್ ಪೇ ನಂಬರ್ ಗೆ ಹಣ ವರ್ಗಾಯಿಸಿ ಅಧ್ಯಾಪಕರು ಸಹಿತ ಹಲವರು ವಂಚನೆಗೊಳಗಾಗಿದ್ದಾರೆ.
ಪೆರ್ಲ ಶಾಲೆಯ ಮುಖ್ಯ ಶಿಕ್ಷಕರು, ಪಡ್ರೆ ವಾಣೀನಗರ ಸರಕಾರಿ ಶಾಲೆಯ ಇಬ್ಬರು ಶಿಕ್ಷಕರು, ಬೆಳ್ಳೂರು ಸÀರ್ಕಾÁರಿ ಹೈಯರ್ ಸೆಕೆಂಡರಿ ಶಾಲೆಯ ಯುಪಿ ವಿಭಾಗದ ಶಿಕ್ಷಕರ ಹೆಸರಲ್ಲಿ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಅವರ ಫ್ರೆಂಡ್ ಲಿಸ್ಟ್ ನಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅಂಗೀಕರಿಸಿದಲ್ಲಿ ಮೆಸೆಂಜರ್ ಮೂಲಕ ಸಹಾಯ ಯಾಚಿಸಿ ನನ್ನ ಅಕೌಂಟ್ ಸರ್ವರ್ ಡೌನ್ ಆಗಿದ್ದು ತುರ್ತಾಗಿ ಗೂಗಲ್ ಪೇ ಅಥವಾ ಫೆÇೀನ್ ಪೇ ಮೂಲಕ ಹಣ ವರ್ಗಾಯಿಸುವಂತೆ, ಎರಡು ಗಂಟೆಗಳಲ್ಲಿ ಹಿತಿರುಗಿಸುವುದಾಗಿ ತಿಳಿಸಿ ಸಂದೇಶ ಕಳುಹಿಸಲಾಗಿದೆ.ಇದನ್ನು ನಂಬಿದ ಫ್ರೆಂಡ್ ಲಿಸ್ಟ್ ನಲ್ಲಿರುವ ಅಧ್ಯಾಪಕರು, ಇತರರು ಹತ್ತರಿಂದ ಹದಿನೈದು ಸಾವಿರದ ವರೆಗೆ ಹಣ ವರ್ಗಾಯಿಸಿದ್ದಾರೆ.ಫ್ರೆಂಡ್ ಲಿಸ್ಟ್ ನಲ್ಲಿರುವರು ಹಣದ ಬೇಡಿಕೆ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಾಗ ಅಸಲಿ ಖಾತೆಯ ವ್ಯಕ್ತಿ ಹಾಗೂ ಹಣ ಕಳುಹಿಸಿದವನಿಗೆ ವಂಚನೆ ಬಗ್ಗೆ ತಿಳಿದರೂ ಅನೇಕರು ಹಣ ಕಳೆದು ಕೊಂಡಿರುತ್ತಾರೆ.
ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣದ ಬೇಡಿಕೆಯಿರಿಸಿ ವಂಚನೆ ನಡೆಸುತ್ತಿರುವ ಬಗ್ಗೆ ಶಿಕ್ಷಕರು ಸ್ಥಳೀಯ ಪೆÇಲೀಸ್ ಠಾಣೆಗೆ ದೂರು ನೀಡಿದ್ದು ದಿನವೊಂದರಲ್ಲಿ ಹತ್ತರಿಂದ ಹದಿನೈದು ಈ ರೀತಿಯ ಪ್ರಕರಣ ದಾಖಲಾಗುತ್ತಿರುವುದಾಗಿ ತಿಳಿಸಿದ್ದಾರೆ.ಗೂಗಲ್ ಪೇ, ಫೆÇೀನ್ ಪೇ ವರ್ಗಾವಣೆಗೆ ಬಳಸಿದ ಮೊಬೈಲ್ ನಂ.ಪಶ್ಚಿಮ ಬಂಗಾಲ ಸಹಿತ ಇತರ ರಾಜ್ಯಗಳ ವ್ಯಕ್ತಿಗಳದ್ದೆಂದು ತಿಳಿದು ಬಂದಿದೆ.
ಫಾಯಿಂಟ್ 1)
ನಮ್ಮ ಫೇಸ್ ಬುಕ್ ಖಾತೆಯ ನಕಲಿ ಸೃಷ್ಟಿಯಾಗಿದೆಯೇ ಎಂಬುದನ್ನು ಹೇಗೆ ತಿಳಿಯಬಹುದು ?
ನಮ್ಮ ಫೇಸ್ ಬುಕ್ ಖಾತೆ ತೆರೆದು ಸರ್ಚ್ ಓಪ್ಶನ್ ನಲ್ಲಿ ನಮ್ಮ ಪೂರ್ಣ ಹೆಸರು ದಾಖಲಿಸಿದಲ್ಲಿ ಆಲ್ ಅಥವಾ ಪೀಪಲ್ ವಿಭಾಗದಲ್ಲಿ ನಮ್ಮ ಹೆಸರನ್ನು ಹೋಲುವ ಇತರ ವ್ಯಕ್ತಿಗಳ ಹೆಸರು ಕಾಣಿಸುತ್ತವೆ.ಇದರಲ್ಲಿ ನಮ್ಮದೇ ಹೆಸರು, ಚಿತ್ರ ಇದ್ದಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದೆ ಎಂಬುದನ್ನು ತಿಳಿಯಬಹುದು.ನಕಲಿ ಖಾತೆ ಕಂಡು ಬಂದರೆ ಅಸಲಿ ಖಾತೆಯಲ್ಲಿ ಹೊಸ ಪೆÇೀಸ್ಟ್ ಮೂಲಕ ನನ್ನ ಹೆಸರಲ್ಲಿ ನಕಲಿ ಖಾತೆ ತೆರೆಯಲಾಗಿದ್ದು ಫ್ರೆಂಡ್ ರಿಕ್ವೆಸ್ಟ್ ಬಂದಲ್ಲಿ ಅಂಗೀಕರಿಸಬೇಡಿ, ಮೆಸೆಂಜರ್ ಮೂಲಕ ಹಣದ ಬೇಡಿಕೆ ಇರಿಸಿದಲ್ಲಿ ವರ್ಗಾಯಿಸದಿರಿ ಎಂದು ಎಚ್ಚರಿಸಬಹುದು.ಅಲ್ಲದೆ ಸರ್ಚ್ ಆಪ್ಶನ್ ನಲ್ಲಿ ಫೇಸ್ ಬುಕ್ ಖಾತೆಯ ಮೇಲ್ಬಾಗದಲ್ಲಿರುವ ಮೂರು ಚುಕ್ಕೆಗಳನ್ನು ಅದುಮುವ ಮೂಲಕ 'ಫೈಂಡ್ ಸಪೆÇ್ಪೀರ್ಟ್ ಓರ್ ರಿಪೆÇೀರ್ಟ್ ಪೆÇ್ರಪ್ಲೈಲ್' ಮೂಲಕ ಪ್ರೆಟೆಂಡಿಂಗ್ ಟು ಬಿ ಸಮ್ ವನ್ ಎಲ್ಸ್ ಅಥವಾ ಫೇಕ್ ಎಕೌಂಟ್ ಎಂಬುದಾಗಿ ಫೇಸ್ ಬುಕ್ ಗೆ ರಿಪೆÇೀರ್ಟ್ ಮಾಡಬಹುದು, ಅಥವಾ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಸಂಶಯ ಬಂದಲ್ಲಿ ಬ್ಲಾಕ್ ಮಾಡುವ ಆಪ್ಶನ್ ಕೂಡಾ ಇದೆ.
ಫಾಯಿಂಟ್ 2)
ಅಡೂರು ಶಾಲೆಯ ಅಧ್ಯಾಪಕರೋರ್ವರು ಇತ್ತೀಚೆಗೆ ತಮ್ಮ ಬ್ಯಾಂಕ್ ಖಾತೆಯಿಂದ ತುರ್ತು ಅಗತ್ಯಕ್ಕೆ 60 ಸಾವಿರ ಹಿಂಪಡೆದಿದ್ದು, ಒಂದೆರಡು ಗಂಟೆಗಳಲ್ಲಿ ಬ್ಯಾಂಕ್ ಅಧಿಕಾರಿಗಳೆಂದು ತಿಳಿಸಿದ ವ್ಯಕ್ತಿ ಮೊಬೈಲ್ ಗೆ ಕರೆ ಮಾಡಿ ಒಂದು ಬಾರಿ 50 ಸಾವಿರಕ್ಕಿಂತ ಜಾಸ್ತಿ ಹಣ ಹಿಂಪಡೆಯುವಂತಿಲ್ಲ.10 ಸಾವಿರವನ್ನು ಖಾತೆಗೆ ಮರು ವರ್ಗಾಯಿಸುವಂತೆ ತಿಳಿಸಿದ್ದರು.ಅಧ್ಯಾಪಕರು ಹಣ ವರ್ಗಾಯಿಸಿದ ಕೆಲವೇ ಕ್ಷಣಗಳಲ್ಲಿ ಒಟಿಪಿ (ವನ್ ಟೈಮ್ ಪಾಸ್ ವರ್ಡ್) ತಿಳಿಸುವಂತೆ ಹೇಳಿ ಬ್ಯಾಂಕ್ ಅಧಿಕಾರಿಗಳೆಂದೇ ನಂಬಿದ ಅವರು ಅದನ್ನು ನೀಡಿದ್ದರು.ಕ್ಷಣ ಮಾತ್ರದಲ್ಲಿ ಅವರ ಖಾತೆಯಿಂದ ಸುಮಾರು 1,50 ಲಕ್ಷ ಹಿಂಪಡೆದು ವಂಚಿಸಲಾಗಿದೆ.
ಅಭಿಮತ:
ನಕಲಿ ಫೇಸ್‍ಬುಕ್ ಮೂಲಕ ವಂಚನೆಯ ಕೆಲವೊಂದು ಕೇಸುಗಳು ಬದಿಯಡ್ಕ ಠಾಣೆಗೆ ಲಭಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಇದನ್ನು ಸೈಬರ್‍ಸೆಲ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.ಇಂತಹ ವಂಚನೆ ಬಗ್ಗೆ ಜನತೆ ಜಾಗೃತರಾಗಿರಬೇಕು. ತಮ್ಮ ಫೇಸ್‍ಬುಕ್ ಖಾತೆಯ ಪಾಸ್‍ವರ್ಡ್ ಆಗಾಗ ಬದಲಾಯಿಸಿಕೊಳ್ಳುವುದರ ಜತೆಗೆ ಹ್ಯಾಕ್ ಆಗುವ ಬಗ್ಗೆ ಹೆಚ್ಚಿನ ಗಮನಹರಿಸುವುದು ಒಳಿತು. ಜೊತೆಗೆ ಸುಲಭ ಹಣ ಗಳಿಕೆ ಎಂಬುದು ಅಸಾಧ್ಯ ವಿಷಯವಾಗಿದ್ದು, ಜನರು ಸ್ವ ಬುದ್ದಿಯಿಂದ ಇಂತಹ ವಂಚನಾ ಜಾಲಗಳಿಂದ ದೂರ ಉಳಿಯುವುದು ಒಳಿತು.
ಕೆ. ಸಲೀಂ,
ಸಿ.ಐ.
ಬದಿಯಡ್ಕ ಪೊಲೀಸ್ ಠಾಣೆ.






