ಕಾಸರಗೋಡು: ಪ್ರಾದೇಶಿಕ ಪತ್ರಕರ್ತರಿಗೆ ಸಾಂಸ್ಕøತಿಕ ಕ್ಷೇಮ ನಿಧಿಯನ್ನು ಅನುಮತಿಸಬೇಕೆಂದು ವಿಧಾನಸಭೆಯಲ್ಲಿ ಧ್ವನಿಯೆತ್ತಿ ಅನುಮೋದನೆಯಲ್ಲಿ ಸಹಕರಿಸಿದ ಶಾಸಕರಿಗೆ ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಅಭಿನಂದನೆ ಸಲ್ಲಿಸಿದೆ. ಕೆಜೆಯು ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಞಂಗಾಡ್ ಮತ್ತು ಉದುಮ ಶಾಸಕರಾದ ಇ.ಚಂದ್ರಶೇಖರನ್ ಮತ್ತು ನ್ಯಾಯವಾದಿ ಸಿ.ಎಚ್ ಕುಂಞಂಬು ಅವರಿಗೆ ಶನಿವಾರ ಅಭಿನಂದನೆ ಸಲ್ಲಿಸಲಾಯಿತು.
ರಾಜ್ಯ ವಿಧಾನ ಸಭೆಯ ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಪ್ರಾದೇಶಿಕ ಪತ್ರಕರ್ತರಿಗೆ ರಾಜ್ಯ ಸಾಂಸ್ಕೃತಿಕ ಕಲ್ಯಾಣ ನಿಧಿಯಲ್ಲಿ ಸೇರಿಸಲು ನಿರ್ಧರಿಸಲಾಯಿತು. ಇದನ್ನು ಆದಷ್ಟು ಬೇಗ ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೆಜೆಯು ಜಿಲ್ಲಾ ಸಮಿತಿ ಪದಾಧಿಕಾರಿಗಳು ಶಾಸಕರಿಗೆ ಅಭಿನಂದನೆ ಸಲ್ಲಿಸುವ ವೇಳೆ ಮನವಿ ನೀಡಲಾಯಿತು. ಕೆಜೆಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಕುಮಾರ್ ರಾಜಪುರಂ, ಸದಸ್ಯರಾದ ರವೀಂದ್ರನ್ ಕೊಟ್ಟೋಡಿ, ಸುರೇಶ್ ಕುಕ್ಕಲ್, ಕೆಜೆಯು ರಾಜ್ಯ ಕಾರ್ಯನಿರ್ವಾಹಕ ಸದಸ್ಯ ಸಿಕೆ ನಾಸರ್ ಕಾಞಂಗಾಡ್, ಹರೂನ್ ಚಿತ್ತಾರಿ ಮತ್ತು ಶೆರೀಫ್ ಎರೋಲ್ ಉಪಸ್ಥಿತರಿದ್ದರು.





