ಬದಿಯಡ್ಕ: ಇಂಧನ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ವತಿಯಿಂದ ಪೆಟ್ರೋಲ್ ಪಂಪ್ ವಠಾರದಲ್ಲಿ ಧರಣಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪಿ.ಜಿ ಚಂದ್ರಹಾಸ ರೈ ಧರಣಿ ಉದ್ಘಾಟಿಸಿ ಮಾತನಾಡಿ, ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂಧನ ಬೆಲೆ ಏರಿಕೆಮಾಡುವ ಮೂಲಕ ಜನಸಾಮಾನ್ಯರ ಜೀವನವನ್ನು ಕೇಂದ್ರ ಸರ್ಕಾರ ಮೂರಾಬಟರ್ಟೆಮಾಡಿರುವುದಾಗಿ ಆರೋಪಿಸಿದರು. ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗನ್ನಾಥ ರೈ, ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಎಂ. ಅಬ್ಬಾಸ್, ಕುಂಜಾರ್ ಮಹಮ್ಮದ್ ಹಾಜಿ, ಖಾದರ್ ಮಾನ್ಯ, ಶ್ಯಾಂಪ್ರಸಾದ್ ಮಾನ್ಯ, ಶಾಫಿ ಗೋಳಿಯಡಿ, ಕುಮಾರ್ ನಯರ್, ಮ್ಯಾಥ್ಯೂಸ್, ನವೀನ್ ರೈ, ಶಾಫಿ ಉಪಸ್ಥಿತರಿದ್ದರು.


