ಕಾಸರಗೋಡು : ದಿನವೊಂದಕ್ಕೆ 55 ವಾರ್ಡ್ ಗಳಲ್ಲಿ 4125 ಮಂದಿಗೆ ಕೋವಿಡ್ ತಪಾಸಣೆ ನಡೆಸುವ ನಿಟ್ಟಿನಲ್ಲಿ ವಾಡೊರ್ಂದರಲ್ಲಿ 75 ಮಂದಿಯ ತಪಾಸಣೆ ನಡೆಯಲಿದೆ. ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಬಾಧಿತರು ಇರುವ ಪ್ರದೇಶಗಳನ್ನು ಪತ್ತೆಮಾಡಿ ಹೆಚ್ಚುವರಿ ಕಟ್ಟುನಿಟ್ಟುಗಳನ್ನು ಆಯಾ ತಾಣಗಳಲ್ಲೇ ನಿಗದಿ ಪಡಿಸುವ ನಿಟ್ಟಿನಲ್ಲಿ 'ಸ್ಟ್ರಾಂಗ್ ಮಲ್ಟಿ ಸ್ಟೇಜ್ ರ್ಯಾಂಡಂ ಸಾಂಪ್ಲಿಂಗ್'ನಡೆಸಲಾಗುವುದು. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಪಾಸಣೆ ಕ್ರಮ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 8 ಆರೋಗ್ಯ ಬ್ಲೋಕ್ ಗಳಲ್ಲಿ 777 ವಾರ್ಡ್ ಗಳಿವೆ. ದಿನವೊಂದಕ್ಕೆ 55 ವಾರ್ಡ್ ಗಳಲ್ಲಿ4125 ಮಂದಿಯತಪಾಸಣೆ ನಡೆಯಲಿದೆ. 14 ದಿನ ಕಳೆದು ಮತ್ತೆ ಕೋವಿಡ್ ತಪಾಸಣೆ ನಡೆಸಬೇಕಾಗಿದೆ. ಪೆÇಲೀಸರು, ಆಟೋರಿಕ್ಷಾ ಚಾಲಕರು, ಬಸ್‍ಸಿಬ್ಬಂದಿ, ಅಂಗಡಿ ಮಾಲೀಕರು, ಅಂಗಡಿ, ಕಾರ್ಖಾನೆ, ವ್ಯಾಪಾರ ಸಂಸ್ಥೆಗಳ ನೌಕರರು, ಸರ್ಕಾರಿ ಸಿಬ್ಬಂದಿ ಸಹಿತ ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಈ ನಿಟ್ಟಿನಲ್ಲಿ ಕಡ್ಡಾಯ ತಪಾಸಣೆ ನಡೆಯಬೇಕಿದೆ.
ವಿಶೇಷಚೇತನರು, ಹಾಸುಗೆ ಹಿಡಿದಿರುವ ರೋಗಿಗಳು, ಸಾಂತ್ವನ ಶುಶ್ರೂಷೆ ಪಡೆಯುತ್ತಿರುವ ರೋಗಿಗಳುಮೊದಲಾದವರಿಗೆ ಅವರ ಮನೆಗಳಿಗೇ ತೆರಳಿ ವಾಕ್ಸಿನ್‍ನೀಡಲು ಉದ್ದೇಶಿಸಲಾಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಖಚಿತತೆಮೂಡಿಸಲು ಪೆÇಲೀಸರು, ಸೆಕ್ಟರಲ್ ಮೆಜಿಸ್ಟ್ರೇಟರು ನಡೆಸುತ್ತಿರುವ ಪರಿಶೀಲನೆ ಚುರುಕಿನಿಂದ ಮುಂದುವರಿಯಲಿದೆ.ಕೋವಿಡ್ ಮೂರನೇ ಅಲೆಯಅವಧಿಯಲ್ಲಿ ಮಕ್ಕಳಿಗೆ ಹೆಚ್ಚು ಬಾಧೆಯುಂಟಾಗಲಿದೆ ಎಂದು ಆರೋಗ್ಯಪರಿಣತರು ಅಭಿಪ್ರಾಯಪಟ್ಟಿರುವ ಕಾರಣ ಕಾಞಂಗಾಡಿನ ಅಮ್ಮ ಮತ್ತು ಮಗು ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ಸಜ್ಜುಗೊಳಿಸಲು ಆದೇಶ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆ, ಟಾಟಾ ಆಸ್ಪತ್ರೆ, ಕಾಸರಗೊಡು ಸರಕಾರಿ ಮೆಡಿಕಲ್ ಕಾಲೇಜು, ಜನರಲ್ ಆಸ್ಪತ್ರೆ ಇತ್ಯಾದಿ ಕಡೆ ಅಗತ್ಯದ ಸಜ್ಜೀಕರಣ ನಡೆಸಲು ಸಭೆ ತೀರ್ಮಾನಿಸಿದೆ.
ಅನಧಿಕೃತ ಮದ್ಯ:ಕಾರ್ಯಾಚರಣೆಗೆ ಆದೇಶ:
ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ ಅನಧಿಕೃತ ಮದ್ಯ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ರದೇಶಗಳಿಗೆ ಅಬಕಾರಿ ದಳ ದಾಳಿ ನಡೆಸಬೇಕು. ಉಭಯ ರಾಜ್ಯಗಳ ಅಬಕಾರಿ ದಳಗಳು ಜಂಟಿ ತಪಾಸಣೆ ನಡೆಸಲೂ ಆದೇಶಿಸಲಾಗಿದೆ. ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್. ನಾಥ್, ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಎ.ಎಸ್.ಪಿ. ಪ್ರಜೀಷ್‍ತೋಟತ್ತಿಲ್, ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿಡಾ.ಎ.ವಿ.ರಾಮದಾಸ್‍ಮೊದಲಾದವರು ಉಪಸ್ಥಿತರಿದ್ದರು.


