ಕಾಸರಗೋಡು: ಕಾಸರಗೊಡು ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಿಶೇಷಚೇತನರಿಗೆ ಕೋವಿಡ್ ವಾಕ್ಸಿನೇಷನ್ ಖಚಿತಪಡಿಸುವ ನಿಟ್ಟಿನಲ್ಲಿ ಪಂಚಾಯತ್, ನಗರಸಭೆ ಮಟ್ಟದಲ್ಲಿ ನೋಂದಣಿ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ.
ಬ್ಲೋಕ್ ಮಟ್ಟದಲ್ಲಿ ಪ್ರತ್ಯೇಕ ಸಂಚಾಲಕರನ್ನೂ ನೇಮಿಸಲಾಗಿದೆ. ಪ್ರತ್ಯೇಕ ಪರಿಶೀಲನೆ, ನಿಗಾ ವಿಭಾಗದ ವಿಶೇಷಚೇತನರನ್ನು ಪ್ರತ್ಯೇಕ ಆದ್ಯತೆ ವಿಭಾಗದವರು ಎಂದು ಅಳವಡಿಸಲಾಗಿದೆ. ನೋಂದಣಿ ಪೂರ್ಣಗೊಳಿಸಿದ ನಂತರ ಮೊಬೈಲ್ ವಾಕ್ಸಿನೇಷನ್ ಯೂನಿಟ್ ಗಳನ್ನು ಸಜ್ಜುಗೊಳಿಸಿ ಮನೆಗಳಿಗೆ ಯಾ ಪ್ರತ್ಯೇಕವಾಗಿ ಸಿದ್ಧಗೊಳಿಸಿದ ಕೇಂದ್ರಗಳಿಗೆ ಇವರಿಗೆ ವಾಕ್ಸಿನೇಷನ್ ನೀಡಲಾಗುವುದು.
ಜಿಲ್ಲಾಡಳಿತೆ ಮತ್ತು ಸಮಾಜನೀತಿ ಇಲಾಖೆಯ ನೇತೃತ್ವದಲ್ಲಿ ಕೇರಳ ಸಮಾಜ ಸುರಕ್ಷೆ, ಕುಟುಂಬಶ್ರೀ ಮಿಷನ್, ಸಮಗ್ರ ಶಿಕ್ಷಣ ಕೇರಳ, ಅಕ್ಕರ ಫೌಂಡೇಷನ್ ಇತ್ಯಾದಿಗಳ ಸಹಕಾರದೊಂದಿಗೆ ನೋಂದಣಿ ಯಜ್ಞ ಆರಂಭಿಸಲಾಗಿದೆ. ವಾಕ್ಸಿನ್ ನೋಂದಣಿ ಪೂರ್ಣಗೊಂಡ ನಂತರ ಸಹಾಯ ಕೇಂದ್ರಗಳ ಸೇವೆ ವಿಸ್ತೃತಗೊಳಿಸಲಾಗುವುದು. ಹೆಚ್ಚುವರಿ ಮಾಹಿತಿಗಳಿಗೆ ಜಿಲ್ಲಾ ಮಟ್ಟದ ಸಂಚಲನಾ ಸಮಿತಿಗಳನ್ನು ಸಂಪರ್ಕಿಸಬಹುದು. ಅವುಗಳ ದೂರವಾಣಿ ಸಂಖ್ಯೆಗಳು ಈ ಕೆಳಗೆ ನೀಡಲಾಗಿದೆ :
ಕಾಸರಗೋಡು ಜಿಲ್ಲಾ ಸಮಾಜನೀತಿ ಕಚೇರಿ-04994-2550749, 8848057637.
ಎಲ್.ಎಲ್.ಸಿ. ನ್ಯಾಷನಲ್ ಟ್ರಸ್ಟ್ -9895653040, 9446606176.
ಕೆ.ಎಸ್.ಎಸ್.ಎಂ.-9645222573.
ಅಕ್ಕರ ಫೌಂಡೇಷನ್ -6282812703.
ಬ್ಲೋಕ್ ಮಟ್ಟದ ಸಂಚಲನ ಸಮಿತಿಗಳು :
ಕಾಸರಗೋಡು ಬ್ಲೋಕ್ -9446515906.
ಕಾರಡ್ಕ ಬ್ಲೋಕ್ -6282812703.
ಮಂಜೇಶ್ವರ ಬ್ಲೋಕ್ - 9645222573.
ಕಾಞಂಗಾಡು ಬ್ಲೋಕ್ - 9446680206.
ಪರಪ್ಪ ಬ್ಲೋಕ್ - 9895653040.
ನೀಲೇಶ್ವರ ಬ್ಲೋಕ್ - 8848320284.
……………………………………………..





