ಮಧೂರು: ಕನ್ನಡ ಸಾಹಿತ್ಯ ಸಾಂಸ್ಕøತಿಕ ಲೋಕಕ್ಕೆ ಮಹಾನ್ ಕೊಡುಗೆ ನೀಡಿದ ಗಡಿನಾಡು ಕಾಸರಗೋಡು ಭಾಷಾವಾರು ಪ್ರಾಂತ್ಯ ರಚನೆ ನಂತರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಹಲವು ಹೋರಾಟಗಳು ನಡೆದು ಕೆಲವು ಯಶಸ್ವಿಯಾಗದೇ ಉಳಿದಿದೆ. ಕೋವಿಡ್ ಸಮಯದಲ್ಲಿ ಗಡಿ ನಿರ್ಬಂಧದ ಪರಿಣಾಮ ಕರ್ನಾಟಕವನ್ನು ಆಶ್ರಯಿಸಿದ್ದ ಕನ್ನಡಿಗರು ಪಾಲಿಗೆ ಮತ್ತು ದುಸ್ತರವಾಯಿತು.
ಕಳೆದ ವರ್ಷ ಕರ್ನಾಟಕ ಸರ್ಕಾರ ಕಲಾವಿದರಿಗೆ ಘೋಷಿಸಿದ ಪರಿಹಾರ 2000 ರೂ. ಯಕ್ಷಗಾನ ಅಕಾಡೆಮಿಯ ಮೂಲಕ ಬೆರಳೆಣಿಕೆಯ ಕೆಲವರಿಗೆ ಲಭಿಸಿರುತ್ತದೆ. ಅಂದಾಜು ಇನ್ನೂರರವರೆಗೆ ಯಕ್ಷಗಾನ ಕಲಾವಿದರು ಹಾಗೂ ಹಲವು ನಾಟಕ ಕಲಾವಿದರು ಇನ್ನಿತರರು ಪರಿಹಾರ ವಂಚಿತರಾಗಿದ್ದಾರೆ. ಯಕ್ಷಗಾನ ಹೆಚ್ಚಿನ ಮೇಳಗಳಲ್ಲಿ ಗಡಿನಾಡಿನ ಕಲಾವಿದರ ಸಂಖ್ಯೆ ಹೆಚ್ಚು.
ಗಡಿನಾಡು ಕಾಸರಗೋಡಿನಲ್ಲೂ ಹಲವಾರು ಯಕ್ಷಗಾನ ಮೇಳಗಳಿದ್ದು ಈ ಹಿಂದೆ ಹಲವು ನಿಂತಿದೆ. ಈ ಸಂದರ್ಭದಲ್ಲಿ ಬೆರಳೆಣಿಕೆಯ ಮೇಳಗಳಿದ್ದು, ಮೂರು ಮೇಳಗಳು ಪ್ರದರ್ಶನ ಗಳಿಲ್ಲದೆ ಏನೂ ಮಾಡಲಾಗದೆ ಯೋಚಿಸುವಂತಾಗಿದೆ. ಕರ್ನಾಟಕ ಸರ್ಕಾರ ಈ ವರ್ಷ ಘೋಷಿಸಿದ ಪರಿಹಾರ ಗಡಿನಾಡು ಕಲಾವಿದರಿಗೆ ದೊರಕಲಿಲ್ಲ. ಆನ್ಲೈನ್ ಬುಕ್ಕಿಂಗ್ ಆದ ಕಾರಣ ಕಾಸರಗೋಡಿನ ಹೆಸರನ್ನು ಸೂಚಿಸಲಾಗುತ್ತಲ್ಲ. ಅತ್ತ ಕೇರಳ ಸರ್ಕಾರವು ಈ ಬಗ್ಗೆ ಯೋಚಿಸಿದಂತಿಲ್ಲ. ಉಭಯ ರಾಜ್ಯಗಳ ಮಧ್ಯೆ ಗಡಿನಾಡು ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಮನವಿ ಮಾಡಿದೆ.




