ಕಾಸರಗೋಡು: ಆಷಾಡ ಮಾಸದಲ್ಲಿ ದೈವಕೋಲಗಳ ನರ್ತನ ನಡೆಸಬಹುದು. ಆರೋಗ್ಯ ವಿಭಾಗವು ಈ ಸಂಬಂಧ ನೀತಿ ಸಂಹಿತೆ ಸಿದ್ಧಪಡಿಸಲಿದೆ. ನೀತಿಸಂಹಿತೆಗಳನ್ನು ಪಾಲಿಸಿ ದೈವಕೋಲಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನೀತಿ ಸಂಹಿತೆ ಸಿದ್ಧಪಡಿಸಲು ಆರೋಗ್ಯ ವಿಭಾಗಕ್ಕೆ ಹೊಣೆ ನೀಡಲಾಗಿದೆ. ದೈವ ಕೋಲ ಕಲಾವಿದ ಮತ್ತು ಜತೆಗಿರುವ ಮಂದಿಮನೆ ಮನೆ ತೆರಳುವ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ ಇತ್ಯಾದಿ ಕಡ್ಡಾಯವಾಗಿರುವುದು. ಜಿಲ್ಲಾ ವೈದ್ಯಾಧಿಕಾರಿ ಅವರು ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಲು ದೈವಕೋಲ ತಂಡದ ಸದಸ್ಯರು ಸಿದ್ಧರಾಗಬೇಕು. ಜಿಲ್ಲೆಯ ಆರಾಧನಾ ಕಲೆ ಎಂಬ ಹಿನ್ನೆಲೆಯಲ್ಲಿ ದೈವಕೋಲ ಕಲಾವಿದರ ಬದುಕು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆ ತಿಳಿಸಿದೆ.




