ಬದಿಯಡ್ಕ: 2020-21ನೇ ಸಾಲಿನ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಉನ್ನತ ಅಂಕದೊಂದಿಗೆ ತೇರ್ಗಡೆಯಾಗಿ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.
18 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯದಲ್ಲಿಯೂ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಾದ ಅನನ್ಯಾ ಪಿ, ಅನಿತಾ ಸರಸ್ವತಿ ಕೆ, ಅನುಷಾ ಕೆ, ಅವ್ಯಯ ಸುಧಾ ಸಿ, ಪ್ರಣತಿ ಜಿ ಎನ್, ಶ್ರೀಜಾ ಉದನೇಶ್, ಶ್ರೀರಕ್ಷಾ ಹೆಚ್ ಭಂಡಾರಿ, ಸ್ನೇಹಾ ಕೆ, ಸ್ತುತಿಶೀಲಾ, ತೃಶಾ, ವರ್ಷಲಕ್ಷ್ಮೀ ಕೆ, ಆದಿತ್ಯ ಯು, ಅನಂತಕೃಷ್ಣ ಕೆ, ಮನುಪರಮೇಶ್ವರ ಭಟ್ ಪಿ, ನಂದನ ಎಸ್ ಕೆ, ಪ್ರಣವ್ ಜಿ ಎನ್, ಪೃಥ್ವೀರಾಜ್ ಚೆರ್ಕೋಡ್ಲು, ವಿಜೇತ ಸುಬ್ರಹ್ಮಣ್ಯ ಕೆ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಒಟ್ಟು 23 ಮಂದಿ ಪರೀಕ್ಷೆಯನ್ನು ಬರೆದಿದ್ದರು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘವು ಶಾಲೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದೆ.





