ಕಾಸರಗೋಡು: ಕಳೆದೊಂದು ವಾರದ ಸರಾಸರಿ ಟಿ.ಪಿ.ಆರ್. 13.8 ಆಗಿದ್ದು, ಕಾಸರಗೋಡು ಜಿಲ್ಲೆಯ 13 ಸ್ಥಳೀಯಾಡಳಿತ ಸಂಸ್ಥೆಗಳು "ಡಿ" ಕ್ಯಾಟಗರಿಯಲ್ಲಿ ಸೇರ್ಪಡೆ ಗೊಳಿಸಲಾಗಿದೆ.
ಜು.16 ರಿಂದ ಕೋವಿಡ್ ಕಟ್ಟುನಿಟ್ಟುಗಳಿಗೆ ಸಡಿಲಿಕೆ ಜಾರಿಗೊಳಿಸುವ ನಿಟ್ಟಿನಲ್ಲಿ ಟಿ.ಪಿ.ಆರ್. ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಂಗಡಿಸಲಾಗಿದೆ. ಜು.7ರಿಂದ ಜು.13 ವರೆಗಿನ (ಒಂದು ವಾರದ ಅವಧಿಯ) ಟಿ.ಆರ್.ಪಿ. ಗಣನೆಯ ಹಿನ್ನೆಲೆಯಲ್ಲಿ 17 ಸ್ಥಳೀಯಾಡಳಿತ ಸಂಸ್ಥೆಗಳನ್ನು "ಡಿ" ಕ್ಯಾಟಗರಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. 12 ಸ್ಥಳೀಯಾಡಳಿತ ಸಂಸ್ಥೆಗಳು "ಸಿ" ಕ್ಯಾಟಗರಿಯಲ್ಲೂ, 10 ಸ್ಥಳೀಯಾಡಳಿತ ಸಂಸ್ಥೆಗಳು "ಬಿ" ಕ್ಯಾಟಗರಿಯಲ್ಲೂ, 2 ಸ್ಥಳೀಯಾಡಳಿತ ಸಂಸ್ಥೆಗಳು "ಎ" ಕ್ಯಾಟಗರಿಯಲ್ಲೂ ಸೇರ್ಪಡೆಗೊಂಡಿವೆ.
ಒಂದು ವಾರದ ಟಿ.ಪಿ.ಆರ್. ಶೇ 15ಕ್ಕಿಂತ ಮೇಲ್ಪಟ್ಟು ಇರುವ ಹಿನ್ನೆಲೆಯಲ್ಲಿ ಪಿಲಿಕೋಡ್(29.45), ದೇಲಂಪಾಡಿ(26.42), ಚೆಮ್ನಾಡು(23.17), ಉದುಮಾ(22.96), ಕಯ್ಯೂರು-ಚೀಮೇನಿ(22.71)ಕಿನಾನೂರು-ಕರಿಂದಳಂ(22.65), ಅಜಾನೂರು(20.40), ಮಡಿಕೈ(18.94), ಕೋಡೋಂ-ಬೇಳೂರು(18.46), ಚೆಂಗಳ(17.97), ಕಳ್ಳಾರ್(17.44), ಪಳ್ಳಿಕ್ಕರೆ(17.42), ನೀಲೇಶ್ವರ(17,20), ಪನತ್ತಡಿ(16.35), ಬೇಡಡ್ಕ(16.07), ಕುತ್ತಿಕೋಲು(15.69), ಪುಲ್ಲೂರು-ಪೆರಿಯ(15.25) ಗ್ರಾಮ ಪಂಚಾಯತ್ ಗಳು "ಡಿ" ಕ್ಯಾಟಗರಿಯಲ್ಲಿವೆ.
ಒಂದು ವಾರದ ಸರಾಸರಿ ಟಿ.ಪಿ.ಆರ್. 10ರಿಂದ 15ರ ನಡುವೆ ಇರುವ ಮಧೂರು(13.99), ಚೆರುವತ್ತೂರು(13.46), ವಲಿಯಪರಂಬ(13.18), ಮೊಗ್ರಾಲ್ ಪುತ್ತೂರು(12.18), ವೆಸ್ಟ್ ಏಳೇರಿ(11.77), ತ್ರಿಕರಿಪುರ(11.05), ಬಳಾಲ್(10.91), ಈಸ್ಟ್ ಏಳೇರಿ(10.61), ಮುಳಿಯಾರು(10.50), ಪುತ್ತಿಗೆ(10.39), ಮೀಂಜ(10.29) ಗ್ರಾಮ ಪಂಚಾಯತ್ ಗಳು ಮತ್ತು ಕಾಞಂಗಾಡು ನಗರಸಭೆ(13.45) "ಸಿ" ಕ್ಯಾಟಗರಿಯಲ್ಲಿ ಸೇರ್ಪಡೆಗೊಂಡಿವೆ.
ಒಂದು ವಾರದ ಟಿ.ಪಿ.ಆರ್. 5ರಿಂದ 10 ರ ನಡುವೆ ಇರುವ ಬದಿಯಡ್ಕ(9.60), ಕುಂಬಡಾಜೆ(9.52), ಎಣ್ಮಕಜೆ(8.65), ಮಂಜೇಶ್ವರ(8.49), ಮಂಗಲ್ಪಾಡಿ(8.16), ಬೆಳ್ಳೂರು(7.95), ಕುಂಬಳೆ(7.74), ಪೈವಳಿಕೆ(6.98), ಪಡನ್ನ(5.59), ಕಾರಡ್ಕ(5.38) ಗ್ರಾಮ ಪಂಚಾಯತ್ ಗಳೂ "ಬಿ" ಕ್ಯಾಟಗರಿಯಲ್ಲಿ ಸೇರಿವೆ.
ಕಾಸರಗೋಡು ನಗರಸಭೆ(3.66), ವರ್ಕಾಡಿ ಗ್ರಾಮ ಪಂಚಾಯತ್ (3.62) ಕ್ಯಾಟಗರಿ "ಎ"ಯಲ್ಲಿವೆ.





