HEALTH TIPS

ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಧಕ್ಕಿಂತ ಹೆಚ್ಚು ಜನರಿಗೆ ಮೊದಲ ಡೋಸ್ ನೀಡಲಾಗಿದೆ: ಆರೋಗ್ಯ ಸಚಿವೆ

               ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಮೊದಲ ಪ್ರಮಾಣವನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 1,66,89,600 ಮಂದಿ ಜನರಿಗೆ ಒಂದು ಅಥವಾ ಎರಡು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಈ ಪೈಕಿ 1,20,10,450 ಮಂದಿ ಜನರಿಗೆ ಮೊದಲ ಡೋಸ್ ಮತ್ತು 46,79,150 ಮಂದಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದವರು ಮಾಹಿತಿ ನೀಡಿರುವರು.

                ಲಸಿಕೆಯನ್ನು ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಅದರಂತೆ, 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 50.04 ಶೇ. ಮೊದಲ ಡೋಸ್ ಮತ್ತು 19.5 ಶೇ. ಎರಡನೇ ಡೋಸ್ ನೀಡಲಾಗಿದೆ. 2011 ರ ಜನಗಣತಿಯ ಪ್ರಕಾರ, ಒಟ್ಟು ಜನಸಂಖ್ಯೆಯ ಶೇಕಡಾ 35.95 ಶೇ.ಜನರಿಗೆ ಮೊದಲ ಡೋಸ್ ಮತ್ತು 14 ಶೇ. ಎರಡನೇ ಡೋಸ್ ನೀಡಲಾಗಿದೆ. ಹೆಚ್ಚು ಲಸಿಕೆಗಳು ಲಭ್ಯವಾದಂತೆ  ಆರೋಗ್ಯ ಇಲಾಖೆಯು ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

                ಲಸಿಕೆ ಪಡೆದವರಲ್ಲಿ ಮಹಿಳೆಯರದೇ ಮೇಲುಗೈ ಇದೆ ಎಂದವರು ತಿಳಿಸಿದರು.  86,70,691 ಮಂದಿ ಮಹಿಳೆಯರು ಮತ್ತು 80,16,121 ಮಂದಿ ಪುರುಷರಿಗೆ ಲಸಿಕೆ ನೀಡಲಾಗಿದೆ.  18 ರಿಂದ 44 ವರ್ಷದೊಳಗಿನ 39,84,992 ಮಂದಿ ಜನರಿಗೆ, 45 ರಿಂದ 60 ವರ್ಷದೊಳಗಿನ 58,13,498 ಮಂದಿ ಜನರಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ 68,91,110 ಮಂದಿ ಜನರಿಗೆ ಈ ಲಸಿಕೆ ನೀಡಲಾಯಿತು. ಎರ್ನಾಕುಳಂ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಲಸಿಕೆ ಹಾಕಿರುವರು.  ಆ ಬಳಿಕ  ತಿರುವನಂತಪುರ ಜಿಲ್ಲಿ ಇದೆ.

                      ಕಾಸರಗೋಡಲ್ಲಿ ನೋ ಲಸಿಕೆ!:

         ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಪ್ರಮಾಣದ ಲಸಿಕೆ ಕೊರತೆ ತಲೆದೋರಿದೆ. ಲಸಿಕೆಗಳಿಗಾಗಿ ಕೋವಿನ್ ಆಫ್ ನಲ್ಲಿ ಸಮರ್ಪಕವಾಗಿ ಯಾರಿಗೂ ಲಸಿಕೆಗೆ ದಾಖಲಾತಿ ಮಾಡಲಾಗದ ಸ್ಥಿತಿ ತಲೆದೋರಿದ್ದು, ಈ ರೀತಿ ಯಾಕಾಗುತ್ತಿದೆ ಎಂಬ ಬಗ್ಗೆ ಯಾರೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries