HEALTH TIPS

ಕೋವಿಡ್: 2-ಡಿಜಿ ಔಷಧ ಉತ್ಪಾದನೆ, ಮಾರಾಟಕ್ಕೆ ಮ್ಯಾನ್‌ಕೈಂಡ್ ಫಾರ್ಮಾಗೆ ಪರವಾನಗಿ

             ನವದೆಹಲಿ: ಔಷಧ ತಯಾರಿಕಾ ಸಂಸ್ಥೆ ಮ್ಯಾನ್‌ಕೈಂಡ್ ಫಾರ್ಮಾ ಕೋವಿಡ್ ಚಿಕಿತ್ಸೆಗೆ ಬಳಸುವ ಓರಲ್ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ತಯಾರಿಕೆ ಮತ್ತು ಮಾರಾಟ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದಿಂದ ಪರವಾನಗಿ ಪಡೆದಿದೆ.

           2-ಡಿಜಿ ಔಷಧವನ್ನು ಗ್ವಾಲಿಯರ್‌ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಇ) ಅಭಿವೃದ್ಧಿಪಡಿಸಿದೆ. ಡಾ. ರೆಡ್ಡೀಸ್ ಪ್ರಯೋಗಾಲಯಗಳ ಸಹಯೋಗದೊಂದಿಗೆ ಡಿಆರ್‌ಡಿಒ ಅಡಿಯ ಲ್ಯಾಬ್‌ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್) ಪ್ರಯೋಗಾಲಯದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಮ್ಯಾನ್‌ಕೈಂಡ್ ಫಾರ್ಮಾ ಪ್ರಕಟಣೆಯಲ್ಲಿ ತಿಳಿಸಿದೆ.

         ಕಂಪನಿಯು ವಿಶಾಖಪಟ್ಟಣ ಮತ್ತು ಹಿಮಾಚಲ ಪ್ರದೇಶದ ತನ್ನ ಶಾಖೆಗಳಲ್ಲಿ ಔಷಧಿಯನ್ನು ಉತ್ಪಾದಿಸಲಿದೆ ಎಂದು ತಿಳಿಸಿದೆ.


          ಮೇ 1 ರಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ವು 2-ಡಿಜಿ ಔಷಧವನ್ನು ಮಧ್ಯಮದಿಂದ ತೀವ್ರವಾದ ಕೋವಿಡ್ -19 ಲಕ್ಷಣಗಳುಳ್ಳ ರೋಗಿಗಳ ಚಿಕಿತ್ಸೆಗೆ ಬಳಸಲು ಅನುಮತಿ ನೀಡಿತ್ತು ಎಂದು ಮ್ಯಾನ್‌ಕೈಂಡ್ ಫಾರ್ಮಾ ತಿಳಿಸಿದೆ.

          ಈ ಔಷಧಿಯು, ಆಸ್ಪತ್ರೆಗೆ ದಾಖಲಾದ ಕೋವಿಡ್-19 ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸೋಂಕಿತರ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

           'ಈ ಒಪ್ಪಂದದ ಹಿಂದಿನ ನಮ್ಮ ಉದ್ದೇಶವೆಂದರೆ, ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಭಾರತೀಯ ರೋಗಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ಔಷಧ ಸರಬರಾಜು ಮಾಡುವುದಾಗಿದೆ' ಎಂದು ಕಂಪನಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries