HEALTH TIPS

ಕುಟುಂಬಶ್ರೀ ಜಿಲ್ಲಾ ಮಿಷನ್ ನ "ಮಳೆ ವೈಭವ" ಯೋಜನೆಯನ್ನು ಉತ್ಸವವಾಗಿ ಆಚರಿಸಲಿರುವ ಸಾರ್ವಜನಿಕರು: ನೂತನವಾಗಿ 21 ಹೆಕ್ಟೇರ್ ಬಂಜರು ಭೂಮಿಯಲ್ಲಿ ಕೃಷಿ ನಡೆಸಲು ಉದ್ದೇಶ

             ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನ "ಮಳೆ ವೈಭವ" ಯೋಜನೆಯನ್ನು ಸಾರ್ವಜನಿಕರು ಉತ್ಸವವಾಗಿಸಿ ಸಾರ್ವಜನಿಕರು ಆಚರಿಸಲಿದ್ದಾರೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 21 ಹೆಕ್ಟೇರ್ ಬಂಜರು ಭೂಮಿಯಲ್ಲಿ ಕೃಷಿ ನಡೆಸಲು ಉದ್ದೇಶ ಇರಿಸಲಾಗಿದೆ. 

           ಬಂಜರು ಭೂಮಿಯನ್ನು ಕೃಷಿಯೋಗ್ಯವಾಗಿ ಹಸನುಗೊಳಿಸಿ ಕೃಷಿ ನಡೆಸುವುದು, ಆಹಾರ ಸುರಕ್ಷೆ ಖಚಿತಪಡಿಸುವುದು, ಸಾರ್ವಜನಿರನ್ನು, ಅದರಲ್ಲೂ ವಿಶೇಷವಾಗಿ ಯುವಜನತೆಯನ್ನು ಕೃಷಿಯತ್ತ ಸೆಳೆಯುವುದು, ಜಿಲ್ಲೆಯ ಕೃಷಿ ಸಂಸ್ಕøತಿಯನ್ನು ಮರಳಿ ತರುವುದು ಇತ್ಯಾದಿ ಉದ್ದೇಶಗಳೊಂದಿಗೆ ಜಿಲ್ಲಾ ಕುಟುಂಬಶ್ರೀ ಮಿಷನ್ "ಮಳೆ ವೈಭವ" ಯೋಜನೆಯನ್ನು ರಚಿಸಿದೆ. ಕಳೆದ 4 ವರ್ಷಗಳಿಂದ ಸತತವಾಗಿ ಅಭಿಯಾನ ರೂಪದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಈ ಬಾರಿಯೂ ಜಾರಿಗೊಳ್ಳಲಿದೆ.


          ಮಳೆ ವೈಭವ ಯೋಜನೆ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ಬಂಜರುಜಾಗಗಳನ್ನೂ ಕೃಷಿಯೋಗ್ಯವಾಗಿಸುವುದು ಪ್ರಧಾನ ಗುರಿಯಾಗಿದೆ. ಈ ವರ್ಷ ನೂತನವಾಗಿ 21 ಹೆಕ್ಟೇರ್ ಬಂಜರು ಭೂಮಿಯನ್ನು ಕೃಷಿಯೋಗ್ಯವಾಗಿಸುವ ನಿಟ್ಟಿನಲ್ಲಿ ಪತ್ತೆಮಾಡಲಾಗಿದೆ. ಇತರ ರಾಜ್ಯಗಳಿಂದ ತರಕಾರಿ ಸಹಿತ ಆಹಾರ ಸಾಮಾಗ್ರಿಗಳ ರವಾನೆ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಕೃಷಿವಲಯವನ್ನು ಸ್ವಾವಲಂಬಿಗೊಳಿಸುವ ಯತ್ನಗಳಿಗೆ ಕುಟುಂಬಶ್ರೀ ಹೆಗಲು ನೀಡುತ್ತಿದೆ. 

               ಕಳೆದ ವರ್ಷ ನಡೆಸಿದ್ದ ಮಳೆ ವೈಭವದಿಂದ 1254 ಹೆಕ್ಟೇರ್ ಬಯಲಿನಲ್ಲಿ ಕೃಷಿ ನಡೆಸಲಾಗಿದೆ. ಮಳೆ ವೈಭವ ಯೋಜನೆ ಮೂಲಕ ಈ ವರೆಗೆ ಒಟ್ಟು 123,89,20,000 ಲೀಟರ್ ನೀರು ಭೂಗರ್ಭಕ್ಕೆ ಸೇರಿದೆ. ಜಿಲ್ಲೆಯ ಭೂಪ್ರಕೃತಿ ಅನುಸಾರ ಮಳೆನೀರು ಹರಿದು ನೇರವಾಗಿ ಸಮುದ್ರ ಸೇರುತ್ತದೆ. ಈ ಯೋಜನೆ ಮೂಲಕ ಮಳೆನೀರು ಇಂಗಿಸುವ ಯತ್ನ ಸಫಲವಾಗಿದೆ. ಭತ್ತದ ಗದ್ದೆಗಳಲ್ಲಿ ಸಂಗ್ರಹವಾಗುವ ಮಳೆನೀರು ಭೂಗರ್ಭ ಜಲದ ಮಟ್ಟವನ್ನು ಹೆಚ್ಚಿಸುವಲ್ಲಿ ಪೂರಕವಾಗಿದೆ. ಸಮೀಪ ಪ್ರದೇಶಗಳ ಬಾವಿ ಸಹಿತ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದು ಇದಕ್ಕೆ ಸಾಕ್ಷಿಯಾಗಿದೆ. 

          ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 1705 ಹೆಕ್ಟೇರ್ ಬಂಜರು ಭೂಮಿ ಪತ್ತೆಯಾಗಿದೆ. 2017ರಲ್ಲಿ ನಡೆಸಿದ ಮಳೆ ವೈಭವ ಕಾರ್ಯಕ್ರಮದ ವೇಳೆ 1556 ಹೆಕ್ಟೇರ್ ಬಂಜರು ಜಾಗ ಕೃಷಿಯೋಗ್ಯವಾಗಿದೆ. ಭತ್ತದ ಕೃಷಿಯಲ್ಲದೆ ತರಕಾರಿ , ಗೆಡ್ಡೆ ಗಣಸು, ಬಾಳೆ ಇತ್ಯಾದಿಗಳನ್ನೂ ಕುಟುಂಬಶ್ರೀ ಸದಸ್ಯರು ಬೆಳೆದಿದ್ದಾರೆ. ಎಲ್ಲ ಗ್ರಾಮ ಪಂಚಾಯತ್ ಗಳಲ್ಲೂ ಕುಟುಂಬಶ್ರೀಯ ನೇತೃತ್ವದಲ್ಲಿ ವಾರದ ಸಂತೆಗಳು, ಕೃಷಿ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನೂ ಆರಂಭಿಸಲಾಗಿದೆ. ಈ ಮೂಲಕ 10,77,500 ರೂ.ನ ಆದಾಯ ಕೃಷಿಕರಿಗೆ ಲಭಿಸಿದೆ. ನಾಡಸಂತೆಗಳು ಸಕ್ರಿಯಗೊಂಡ ಹಿನ್ನೆಲೆಯಲ್ಲಿ ಸಾಮೂಹಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನ್ಯಾಯಬೆಲೆಗೆ ಗೊಬ್ಬರಗಳು ಲಭಿಸತೊಡಗಿವೆ. 6084 ಜಾಯಿಂಟ್ ಲಯಾಬಿಲಿಟಿ ಗ್ರೂಪ್ ಸದಸ್ಯರಿಗೆ ಕೃಷಿ ಅತ್ಯುತ್ತಮ ಆದಾಯಕ್ಕಿರುವ ದಾರಿಯಾಗಿದೆ. 

             ವಿಷಾಂಶ ರಹಿತ ಅಕ್ಕಿ, ತರಕಾರಿಗಳ ವಿತರಣೆಯ ಮೂಲಕ ಮಳೆ ವೈಭವ ಯೋಜನೆ ಮೂಲಕ ಸಾರ್ವಜನಿಕರ ಆರೋಗ್ಯ ಸಂರಕ್ಷಣೆಯಲ್ಲಿ ಕುಟುಂಬಶ್ರೀ ಪಾಲುಪಡೆದಿದೆ. ಯಾವುದೇ ಭೇದಭಾವಗಳಿಲ್ಲದೆ ಜನ ಕೃಷಿಯತ್ತ ಮನಮಾಡುವ ನಿಟ್ಟಿನಲ್ಲಿ ಈ ಯೋಜನೆ ಇತರರಿಗೆ ಮಾದರಿಯಾಗಿದೆ. ಜನಜೀವನದಲ್ಲಿ ಅಭಿವೃದ್ಧಿ ಮೂಡಿಸುವ ಸಲುವಾಗಿ ಜಲಸುರಕ್ಷೆ, ಆಹಾರ ಸುರಕ್ಷೆ, ಆರ್ಥಿಕ ಸುರಕ್ಷೆ, ಸಾಮಾಜಿಕ ಸುರಕ್ಷೆ ಹೀಗೆ 4 ಮೂಲಭೂತ ವಲಯಗಳಲ್ಲಿ ಸ್ವಾವಲಂಬಿತನವನ್ನು ಪಡೆಯುವ ಆಶಯದೊಂದಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಿ.ಡಿ.ಎಸ್. ಗಳಲ್ಲದೆ ವಾರ್ಡ್ ಮಟ್ಟದ ಚಟುವಟಿಕೆಗಳನ್ನೂ ಏಕೀಕರಣಗೊಳಿಸಲಾಗುತ್ತಿದೆ. 

                          30 ವರ್ಷಗಳಿಂದ ಬಂಜರಾಗಿದ್ದ ಬಯಲಿಗೆ ಶಾಪವಿಮೋಚನೆ ನೀಡಿದ "ಮಳೆವೈಭವ"  ಯೋಜನೆ :

        ಬದಿಯಡ್ಕ ಗ್ರಾಮ ಪಂಚಾಯತ್ ನ 4 ನೇ ವಾರ್ಡ್ ಆಗಿರುವ ಪಳ್ಳತ್ತಡ್ಕದಲ್ಲಿ ಕಳೆದ 40 ವರ್ಷಗಳಿಂದ ಬಂಜರಾಗಿದ್ದ ಒಂದು ಎಕ್ರೆ ಬಯಲಿಗೆ "ಮಳೆವೈಭವ" ಯೋಜನೆ ಮೂಲಕ ಶಾಪ ವಿಮೋಚನೆ ಲಭಿಸಿದೆ. ಸಫಲಂ, ದೇವಿಕಾ, ಪೂಜಾ ಎಂಬ ಕುಟುಂಬಶ್ರೀ ಜೆ.ಎಲ್.ಜಿ.ಗಳು ಜಂಟಿಯಾಗಿ ಯೋಜನೆಯ ಅಂಗವಾಗಿ ಇಲ್ಲಿ ನೇಜಿ ನೆಡುವ ಕಾಯಕ ನಡೆಸಿದರು. 

            ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಈ ಚಟುವಟಿಕೆಗೆ ಚಾಲನೆ ನೀಡಿದರು. ಸಿ.ಡಿ.ಎಸ್. ಸಂಚಾಲಕಿ ಅನ್ನತ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಜಯಶ್ರೀ, ಅನಸೂಯಾ, ಜ್ಯೋತಿ, ಮಾಸ್ಟರ್ ಫಾರ್ಮರ್ ಉಷಾ, ಸಿ.ಎಲ್.ಸಿ. ಪ್ರಸನ್ನಾ, ಲೆಕ್ಕಾಧಿಕಾರಿ ಮಮತಾ, ಜೆ.ಎಲ್.ಜಿ. ಕೃಷಿಕರು ಮೊದಲಾದವರು ಉಪಸ್ಥಿತರಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries