ಕಾಸರಗೋಡು: ಸರಕಾರಿ ಸಿಬ್ಬಂದಿ ಸಹಿತ ಸಾರ್ವಜನಿಕರೊಂದಿಗೆ ಬೆರೆಯುವ ಜನ 2 ತಿಂಗಳಿಗೊಮ್ಮೆ ಕೋವಿಡ್ ತಪಾಸಣೆಗೆ ( ಆರ್.ಟಿ.ಪಿ.ಸಿ.ಆರ್/ ಆಂಟಿಜೆನ್ )ಒಳಗಾಗಬೇಕು.
ಆನ್ ಲೈನ್ ರೂಪದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣಾಲಯಗಳ ಚಟುವಟಿಕೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಕರಲ್ಲದೆ ಅನಿವಾರ್ಯ ಸೇವೆಗಳಲ್ಲದೇ ಇರುವ ಜಿಲ್ಲೆಯ ಗಝೆಟೆಡ್ ರಾಂಕ್ನ ಸಿಬ್ಬಂದಿಯನ್ನು ಸೆಕ್ಟರಲ್ ಮೆಜಿಸ್ಟ್ರೇಟ್ ಗಳಾಗಿ ನೇಮಿಸಲಾಗುವುದು. 15 ದಿನಗಳಿಗೊಮ್ಮೆ ಎಂಬ ರೀತಿಯಲ್ಲಿ ಇವರ ಚಟುವಟಿಕೆ ರೂಪುಗೊಳಿಸಲಾಗುವುದು. 71 ಮಂದಿ ಸೆಕ್ಟರಲ್ ಮೆಜಿಸ್ಟ್ರೇಟ್ ಗಳ ನೇಮಕಾತಿ ಜಿಲ್ಲೆಯಲ್ಲಿ ನಡೆಯಲಿದೆ. ಸಬ್ ಡಿವಿಝನಲ್ ಮೆಜಿಸ್ಟ್ರೇಟ್ ಗಳು ಇವರ ಚಟುವಟಿಕೆಗಳ ಮೇಲ್ನೋಟ ವಹಿಸುವರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಡಾಟಾ ಎಂಟ್ರಿ ಕಾಯಕಗಳಿಗೆ ಅಗತ್ಯ ಸೇವೆಗಳಲ್ಲದ ಸರಕಾರಿ ಸಇಬ್ಬಂದಿಯ ಸೇವೆ ಬಳಸಲಾಗುವುದು. ಜೊತೆಗೆ ಲಾಬ್ ಟೆಕ್ನೀಶಿಯನ್ ಗಳನ್ನೂ ನೇಮಿಸಲಾಗುವುದು.
ಕೋವಿಡ್ ಚಟುವಟಿಕೆಗಳಿಗೆ ಸರಕಾರಿ ವಾಹನಗಳ ಸಹಿತ ಹೆಚ್ಚುವರಿ ವಾಹನಗಳನ್ನು ಬಳಸಲಾಗುವುದು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉದ್ಘಾಟನೆ ಸಮಾರಂಭಗಳ ಸಹಿತ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ. ಕಟ್ಟುನಿಟ್ಟು ಉಲ್ಲಂಘಿಸುವವರನ್ನು ಪತ್ತೆ ಮಾಡಿ ಪೆÇಲೀಸರು ಕ್ರಮ ಕೈಗೊಳ್ಳುವರು.
ಕೋವಿಡ್ ಪಾಸಿಟಿವ್ ಖಚಿತ ಗಣನೆ ಹಿನ್ನೆಲೆಯಲ್ಲಿ ಸತತವಾಗಿ 22 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಡಿ.ಸಿ. ವಿಭಾಗಗಳಲ್ಲಿ ಮುಮದುವರಿಯುತ್ತಿವೆ. ಈ ಪಂಚಾಯತ್/ ನಗರಸಭೆಗಳಲ್ಲಿ ಕಟ್ಟುನಿಟ್ಟು ಬಿಗಿಗೊಳಿಸಲಾಗುವುದು.
ಡಿ ಕ್ಯಾಟಗರಿ ಹೊರತುಪಡಿಸಿ ಇತರೆಡೆಗಳಲ್ಲಿ ನಿಗದಿತ ದಿನಗಳಲ್ಲಿ ಟಾಕ್ಸ್ ಪ್ರಾಕ್ಟೀಶಿಯನ್ ಸಂಸ್ಥೆಗಳು ಕೋವಿಡ್ ಕಟ್ಟುನಿಟ್ಟು ಪಾಲಿಸಿ ಚಟುವಟಿಕೆ ನಡೆಸಬಹುದು. ಡಿ ಕ್ಯಾಟಗರಿಯಲ್ಲಿ ಅಗತ್ಯದ ಸೇವೆಗಳು ಮಾತ್ರ ಇರುವುದು.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಎ.ಎಸ್.ಪಿ.ಹರಿಶ್ಚಂದ್ರ ನಾಯ್ಕ್, ಡಿ.ಎಂ.ಒ.ಡಾ.ಕೆ.ಆರ್.ರಾಜನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಇತರ ಇಲಾಖೆ ಮಟ್ಟದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
.......





