ಕಾಸರಗೋಡು: ಕೇರಳ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 82.64 ಫಲಿತಾಂಶ ಬಂದಿದೆ.
ಮುಕ್ತ ವಿದ್ಯಾಲಯಗಳಿಂದ ಶೇ 59.04 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಹೈಯರ್ ಸೆಕೆಂಡರಿಯಲ್ಲಿ 106 ಶಾಲೆಗಳಿಂದ 14,115 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 11,665 ಮಮದಿ ತೇರ್ಗಡೆಹೊಂದಿದರು. 1286 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದರು. ಮುಕ್ತ ವಿದ್ಯಾಲಯ ವಿಭಾಗದಲ್ಲಿ 1543 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 911 ಮಂದಿ ತೇರ್ಗಡೆಹೊಂದಿದರು. ಮೂವರು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದರು.
ವಿ.ಎಚ್.ಎಸ್.ಇ.ಯಲ್ಲಿ ರಿವ್ಯಸ್ ಡ್ ಕಂ ಮೆಡ್ಯೂಲಾರ್ ಸ್ಕೀಂ ನಲ್ಲಿ ಶೇ 73.93 ಫಲಿತಾಂಶ ಲಭಿಸಿದೆ. 886 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 655 ಮಂದಿ ತೇರ್ಗಡೆಹೊಂದಿದರು. ವಿ.ಎಚ್.ಎಸ್.ಸಿ. ಕಂಟೀನ್ಯೂವಸ್ ಇವಾಲ್ಯೂಷನ್ ಆಂಡ್ ಗ್ರೇಡಿಂಗ್ ಎನ್ ಕ್ಯೂ ಎಸ್ ಸ್ಕೀಂ ನಲ್ಲಿ ಫಲಿತಾಂಶ ಶೇ 56.07 ಬಂದಿದೆ. ಪರೀಕ್ಷೆಗೆ ಹಾಜರಾದ 305 ಮಂದಿಯಲ್ಲಿ 171 ಮಂದಿ ತೇರ್ಗಡೆಹೊಂದಿದರು.





