HEALTH TIPS

ಆಗಸ್ಟ್ ತಿಂಗಳ ಆರಂಭದಲ್ಲೇ ಭಾರತದಲ್ಲಿ ಕೊರೊನಾ 3ನೇ ಅಲೆ: ಎಸ್‌ಬಿಐ ಸಂಶೋಧನಾ ವರದಿ

          ನವದೆಹಲಿ: ಮುಂದಿನ ತಿಂಗಳ ಆರಂಭದಲ್ಲಿ ಭಾರತವು ಕೋವಿಡ್ -19 ರ ಮೂರನೇ ಅಲೆಯನ್ನು ಎದುರಿಸಬಹುದು. ಸೆಪ್ಟೆಂಬರ್‌ನಲ್ಲಿ ಪ್ರಕರಣಗಳು ಉತ್ತುಂಗಕ್ಕೇರುತ್ತವೆ ಎಂದು ಸೋಮವಾರ ಎಸ್‌ಬಿಐ ಸಂಶೋಧನೆ ವರದಿಯಲ್ಲಿ ತಿಳಿಸಲಾಗಿದೆ.

       ಈ ಹಿಂದಿನ ಟ್ರೆಂಡ್‌ಗಳ ಆಧಾರದ ಮೇಲೆ ಈ ಸಂಶೋಧನೆ ನಡೆದಿದ್ದು, ಆಗಸ್ಟ್ ತಿಂಗಳ ಆರಂಭದಲ್ಲೇ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆರಂಭವಾಗಬಹುದು. ಕನಿಷ್ಠ ಒಂದು ತಿಂಗಳಲ್ಲಿ ಉತ್ತಂಗಕ್ಕೆ ತಲುಪಬಹುದು' ಎಂದು ಎಸ್‌ಬಿಐನ ಆರ್ಥಿಕ ಸಂಶೋಧನಾ ಇಲಾಖೆ 'ಕೋವಿಡ್ -19: ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯಲ್ಲಿ ಹೇಳಿದೆ.

         ಎರಡನೇ ಅಲೆಯ ಸಮಯದಲ್ಲಿ ಕಂಡು ಬಂದ ಗರಿಷ್ಠ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಮೂರನೇ ಅಲೆಯ ಸಂದರ್ಭ 1.7 ಪಟ್ಟು ಹೆಚ್ಚಿರಲಿವೆ ಎಂದು ಜಾಗತಿಕ ದತ್ತಾಂಶವು ತಿಳಿಸಿದೆ.

          ಜಾಗತಿಕ ಅಧ್ಯಯನದ ಪ್ರಕಾರ, ತಲಾದಾಯ ಹೆಚ್ಚಿರುವ ದೇಶಗಳಲ್ಲಿ ಪ್ರತೀ 10 ಲಕ್ಷ ಜನರಲ್ಲಿ ಹೆಚ್ಚಿನ ಸಾವು ಸಂಭವಿಸಿದ್ದರೆ, ಕಡಿಮೆ ತಲಾದಾಯ ಇರುವ ದೇಶಗಳಲ್ಲಿ ಕಡಿಮೆ ಕೋವಿಡ್ ಸಾವುಗಳು ಕಂಡುಬಂದಿವೆ. ಕೋವಿಡ್ ಸಾಂಕ್ರಾಮಿಕ ಉತ್ತುಂಗದ ಸಮಯದಲ್ಲಿ ಹೆಚ್ಚಿನ ಆದಾಯ ಹೊಂದಿರುವ ದೇಶಗಳೇ ಹೆಚ್ಚು ತೊಂದರೆ ಅನುಭವಿಸಿವೆ ಎಂದು ವರದಿ ಬಹಿರಂಗಪಡಿಸಿದೆ.

      ಈ ಟ್ರೆಂಡ್ ಭಾರತದಲ್ಲೂ ನಿಜವಾಗಿದ್ದು, ಅತ್ಯಧಿಕ ತಲಾದಾಯ ಹೊಂದಿರುವ ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಪ್ರತಿ 10 ಲಕ್ಷಕ್ಕೆ ಜನರಲ್ಲಿ ಹೆಚ್ಚಿನ ಸಾವು ಸಂಭವಿಸಿವೆ ಎಂದು ವರದಿ ತಿಳಿಸಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಗಮನಾರ್ಹ ಪ್ರಮಾಣದ ಠೇವಣಿ ಹೊರಹರಿವು ಕಂಡುಬಂದಿದೆ ಎಂದು ವರದಿಯು ತಿಳಿಸಿದೆ.

        ವಾಣಿಜ್ಯ ಬ್ಯಾಂಕುಗಳು, ಕ್ರೆಡಿಟ್ ಸೊಸೈಟಿಗಳು, ಎನ್‌ಬಿಎಫ್‌ಸಿಗಳು ಮತ್ತು ಎಚ್‌ಎಫ್‌ಸಿಗಳಂತಹ ಹಣಕಾಸು ಸಂಸ್ಥೆಗಳು ಸಾಲಗಳು, ಬೆಳೆ ಸಾಲಗಳು ಮತ್ತು ವ್ಯಾಪಾರ ಸಾಲಗಳನ್ನು ಗಣನೆಗೆ ತೆಗೆದುಕೊಂಡ ನಂತರ 2020 ರಲ್ಲಿ 32.3% ರಷ್ಟಿದ್ದ ಜಿಡಿಪಿಯು 21 ರಲ್ಲಿ 37.3% ಕ್ಕೆ ತೀವ್ರವಾಗಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries