HEALTH TIPS

ಬಾಯಿ ಮೂಲಕ ನೀಡುವ ಕೋವಿಡ್‌ ಲಸಿಕೆ ಅಭಿವೃದ್ಧಿ: ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಕೆ

        ಕೋಲ್ಕತ್ತ: ಕೋವಿಡ್ ಸೋಂಕು ವಿರುದ್ಧ ಚಿಕಿತ್ಸೆಗೆ ಬಾಯಿ ಮೂಲಕ ನೀಡುವ ಲಸಿಕೆ ಅಭಿವೃದ್ಧಿಗೆ ಕೋಲ್ಕತ್ತದ ಐಸಿಎಂಆರ್-ಎನ್‌ಐಸಿಇಡಿ ಸಂಸ್ಥೆಯು ಕೇಂದ್ರದ ಜೈವಿಕ ತಂತ್ರಜ್ಞಾನ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ.

        ಸಂಸ್ಥೆಯ ಅಧಿಕಾರಿಗಳು ಸೋಮವಾರ ಈ ಮಾಹಿತಿ ನೀಡಿದ್ದು, 'ಜರ್ಮನ್‌ ಸಂಸ್ಥೆಯ ಸಹಯೋಗದಲ್ಲಿ ಉಲ್ಲೇಖಿತ ಔಷಧವನ್ನು ಅಭಿವೃದ್ಧಿಲಾಗುವುದು. ಪ್ರಸ್ತಾಪವನ್ನು ಇಲಾಖೆಯ ಪರಿಶೀಲನೆಯಲ್ಲಿದೆ. ಅನುಮೋದನೆ ಮತ್ತು ಹಣಕಾಸು ಬಿಡುಗಡೆ ಹಿಂದೆಯೇ ಅಭಿವೃದ್ಧಿ ಪ್ರಕ್ರಿಯೆಯೂ ಶುರುವಾಗಲಿದೆ' ಎಂದು ತಿಳಿಸಿದ್ದಾರೆ.

        'ಬಾಯಿ ಮೂಲಕ ನೀಡಬಹುದಾದ ಔಷಧವನ್ನು ಅಭಿವೃದ್ಧಿಪಡಿಸಲು ಸುಮಾರು 5-6 ವರ್ಷ ಬೇಕಾಗಬಹುದು. ಅಭಿವೃದ್ಧಿಯ ಬಳಿಕ ಎಲ್ಲ ಲಸಿಕೆಗಳಿಗೂ ಮಾಡುವಂತೆ ಇದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುವುದು' ಎಂದು ಐಸಿಎಂಆರ್‌-ಎನ್‌ಐಸಿಇಡಿ ನಿರ್ದೇಶಕ ಶಾಂತ ದತ್ತಾ ಅವರು ವಿವರಿಸಿದರು.

           ಲಸಿಕೆಯ ಪ್ರಯೋಗ ಕುರಿತ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು 5-6 ವರ್ಷ ಬೇಕಾಗಬಹುದು. ಆ ನಂತರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries