ಕೊಚ್ಚಿ: ರಾಜ್ಯದಲ್ಲಿ ಹಾಲಿನ ಬೆಲೆಯನ್ನು ಹೆಚ್ಚಿಸಲು ಮಿಲ್ಮಾ. ಬೇಡಿಕೆ ಇರಿಸಿದ್ದು, ಪ್ರತಿ ಲೀಟರ್‍ಗೆ 5 ರೂ.ಗಳ ಹೆಚ್ಚಳವನ್ನು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಮಿಲ್ಮಾ ಎರ್ನಾಕುಳಂ ಪ್ರಾದೇಶಿಕ ವಲಯದ ಅಧ್ಯಕ್ಷರು ಹಾಲಿನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. ಪಶುಆಹಾರಗಳ ಬೆಲೆ ಹೆಚ್ಚಳಗೊಂಡಿದೆ. ಇದರಿಂದ ಹಾಲಿನ ಬೆಲೆಯನ್ನು ಹೆಚ್ಚಿಸದೆ ಹತ್ಯಂತರವಿಲ್ಲ ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.
ಹಾಲು ದರವನ್ನು ಹೆಚ್ಚಿಸುವುದು ಡೈರಿ ರೈತರ ಬಿಕ್ಕಟ್ಟನ್ನು ನಿವಾರಿಸುವ ಏಕೈಕ ಮಾರ್ಗವಾಗಿದೆ ಎಂದು ಮಿಲ್ಮಾ ಹೇಳಿಕೊಂಡಿದೆ. ಅಂತಿಮ ನಿರ್ಧಾರವನ್ನು ಡೈರಿ ಅಭಿವೃದ್ಧಿ ಇಲಾಖೆ ಮತ್ತು ಸರ್ಕಾರ ತೆಗೆದುಕೊಳ್ಳಲಿದೆ. ಆದರೆ, ಶಿಫಾರಸು ಈವರೆ ಬಂದಿಲ್ಲ ಎಂದು ಡೈರಿ ಅಭಿವೃದ್ಧಿ ಸಚಿವೆ ಜೆ.ಚಿಂಚುರಾಣಿ ತಿಳಿಸಿದ್ದಾರೆ.





