ಕೊಚ್ಚಿ: ರಾಷ್ಟ್ರ ವಿರೋಧಿ ಟೀಕೆಗಳಿಗಾಗಿ ಚಿತ್ರ ನಿರ್ದೇಶಕಿ ಆಯಿಷಾ ಸುಲ್ತಾನ ಅವರನ್ನು ಇಂದು ಮತ್ತೆ ಪ್ರಶ್ನಿಸಲಾಗಿದೆ. ಕೊಚ್ಚಿಯಲ್ಲಿರುವ ಆಯಿಷಾಳ ಫ್ಲ್ಯಾಟ್ ನಲ್ಲಿ ಪೋಲೀಸ್ ತಂಡ ತನಿಖೆ ನಡೆಸಿದೆ. ಫ್ಲ್ಯಾಟ್‍ನಲ್ಲಿ ಶೋಧದ ವೇಳೆ ಆಯಿಷಾ ಸಹೋದರನ ಲ್ಯಾಪ್‍ಟಾಪ್ ನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ.
ಕವರಟ್ಟಿ ಪೋಲೀಸರು ಮತ್ತು ಇನ್ಫೋಪಾರ್ಕ್ ಪೋಲೀಸರು ಜಂಟಿಯಾಗಿ ಕಾಕ್ಕನಾಡಿನ ಆಯಿಷಾ ಳ ಫ್ಲ್ಯಾಟ್‍ಗೆ ತಲುಪಿ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಆಕೆಯ ಸಹೋದರನ ಬ್ಯಾಂಕ್ ವ್ಯವಹಾರವನ್ನೂ ಪೋಲೀಸರು ಪರಿಶೀಲಿಸಿದ್ದಾರೆ. ಈ ಪ್ರಕರಣದಲ್ಲಿ ಆಯಿಷಾ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.
ಲಕ್ಷದ್ವೀಪದಲ್ಲಿ, ಕೊರೋನಾವನ್ನು ಜೈವಿಕ ಅಸ್ತ್ರವಾಗಿ ಬಳಸಿದ್ದಕ್ಕಾಗಿ ಆಯಿಷಾ ಸುಲ್ತಾನಾ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಚಾನೆಲ್ ಚರ್ಚೆಯ ಸಮಯದಲ್ಲಿ ಈ ಉಲ್ಲೇಖವನ್ನು ಮಾಡಲಾಗಿತ್ತು. ಆಯಿಷಾ ಅವರೊಂದಿಗೆ ಚಾನೆಲ್ ಚರ್ಚೆಯಲ್ಲಿ ಭಾಗವಹಿಸಿದವರನ್ನು ಪ್ರಶ್ನಿಸಲು ಕವರಟ್ಟಿ ಪೋಲೀಸರು ತೆರಳಿದ್ದಾರೆ.
ಆಯಿಷಾ ಅವರನ್ನು ಪೋಲೀಸರು ವಿಚಾರಣೆ ನಡೆಸುತ್ತಿರುವುದು ಇದು ಮೂರನೇ ಬಾರಿ. ಕಳೆದ ಎರಡು ಸಂದರ್ಭಗಳಲ್ಲಿ ಅವರನ್ನು ಲಕ್ಷದ್ವೀಪಕ್ಕೆ ಕರೆಸಲಾಗಿತ್ತು. ಆದರೆ ಪೋಲೀಸರು ಇಂದು ಯಾವುದೇ ಮಾಹಿತಿ ನೀಡದೆ ಕೊಚ್ಚಿಗೆ ತಲುಪಿ ವಿಚಾರಣೆ ನಡೆಸಿದರು. ಪ್ರಕರಣವು ಹೆಚ್ಚು ಜಟಿಲವಾಗಿದೆ ಎಂದು ಇದು ಸೂಚಿಸುತ್ತದೆ.
ಕಳೆದ ಬಾರಿಯ ವಿಚಾರಣೆ ವೇಳೆ ಪೋಲೀಸರು ಮುಖ್ಯವಾಗಿ ಆಯಿಷಾ ಅವರ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದರು. ಇದರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೋಲೀಸರು ಆಯಿಷಾ ಫ್ಲ್ಯಾಟ್ ಗೆ ತಲುಪಿ ಪರಿಶೀಲನೆ ನಡೆಸಿದರೆನ್ನಲಾಗಿದೆ.
ಇದೇ ವೇಳೆ, ಆಯಿಷಾ ಪ್ರತಿಕ್ರಿಯಿಸಿದ್ದು, ಪೋಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವರು.





