HEALTH TIPS

ಕೋವಿಡ್‌: 66 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಲಸಿಕೆ ಖರೀದಿಸಲಿರುವ ಕೇಂದ್ರ

           ನವದೆಹಲಿ: ಕೇಂದ್ರ ಸರ್ಕಾರ 66 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು 'ಕೋವಿಶೀಲ್ಡ್‌' ಮತ್ತು 'ಕೋವ್ಯಾಕ್ಸಿನ್‌' ಲಸಿಕೆಗಳನ್ನು ಪರಿಷ್ಕೃತ ದರದಲ್ಲಿ ಖರೀದಿಸುತ್ತಿದ್ದು, ಈ ಲಸಿಕೆಗಳು ಆಗಸ್ಟ್‌ ಮತ್ತು ಡಿಸೆಂಬರ್ ನಡುವೆ ಪೂರೈಕೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

           ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡಲು ನೀಡುತ್ತಿರುವ ಈ ಲಸಿಕೆಗಳ ಪರಿಷ್ಕೃತ ದರದ ಪ್ರಕಾರ ಕೋವಿಶೀಲ್ಡ್‌ ಪ್ರತಿ ಡೋಸ್‌ಗೆ ₹205 ಮತ್ತು ಕೋವ್ಯಾಕ್ಸಿನ್‌ ಪ್ರತಿ ಡೋಸ್‌ಗೆ 215 ನಿಗದಿಪಡಿಸಲಾಗಿದೆ.

          ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಿಂದ 37.5 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್‌ ಮತ್ತು ಭಾರತ್ ಬಯೋಟೆಕ್‌ನಿಂದ 28.5 ಕೋಟಿ ಡೋಸ್‌ಗಳಷ್ಟು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಖರೀದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

            '66 ಕೋಟಿ ಡೋಸ್‌ಗಳಷ್ಟು ಲಸಿಕೆಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ. ಈ ಲಸಿಕೆಗಳು ಪರಿಷ್ಕೃತ ದರದಲ್ಲಿ ಆಗಸ್ಟ್‌ ಮತ್ತು ಡಿಸೆಂಬರ್‌ ನಡುವೆ ಪೂರೈಕೆಯಾಗಲಿವೆ' ಎಂದು ಮೂಲಗಳು ತಿಳಿಸಿವೆ. ತೆರಿಗೆ ಸೇರಿ ಕೋವಿಶೀಲ್ಡ್ ಪ್ರತಿ ಡೋಸ್‌ ದರ 215 ಮತ್ತು ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ 225.75 ಆಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆ ಎರಡೂ ಕಂಪನಿಯ ಲಸಿಕೆಗಳನ್ನು ಒಂದು ಡೋಸ್‌ಗೆ 150 ದರದಲ್ಲಿ ಖರೀದಿ ಮಾಡುತ್ತಿತ್ತು. 'ಕೋವಿಡ್‌ ಲಸಿಕೆ ಖರೀದಿ ನೀತಿ' ಪರಿಷ್ಕರಣೆಗೊಂಡ ನಂತರ, ದರಗಳೂ ಪರಿಷ್ಕೃತಗೊಂಡಿವೆ. ಈ ಪರಿಷ್ಕೃತ ದರಗಳು ಜೂನ್ 21ರಿಂದ ಜಾರಿಗೆ ಬಂದಿವೆ. ಈ ಹೊಸ ನೀತಿ ಪ್ರಕಾರ, ಔಷಧ ಕಂಪನಿ ಉತ್ಪಾದಿಸಿದ ಒಟ್ಟು ಲಸಿಕೆಗಳಲ್ಲಿ ಶೇ 75ರಷ್ಟನ್ನು ಸಚಿವಾಲಯ ಖರೀದಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries