HEALTH TIPS

ಕೋವಿಡ್ ಪರೀಕ್ಷಾ ಯಜ್ಞದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ: ರೋಗಲಕ್ಷಣಗಳು ಮತ್ತು ರೋಗಿಗಳ ಸಂಪರ್ಕದಲ್ಲಿರುವವರು ಕಡ್ಡಾಯ ತಪಾಸಿಸಿ: ಸಚಿವೆ ವೀಣಾ ಜಾರ್ಜ್

          ತಿರುವನಂತಪುರ: ಜ್ವರ ಮತ್ತು ಶೀತದಿಂದ ಬಳಲುತ್ತಿರುವ ಜನರೊಂದಿಗೆ ಸಂಪರ್ಕದಲ್ಲಿರುವವರು ಮತ್ತು ಕೋವಿಡ್ ಪಾಸಿಟಿವ್ ಆಗಿರುವ ಎಲ್ಲರಿಗೂ ಇಂದು ಮತ್ತು ನಾಳೆ (ಜುಲೈ 15, 16) ತೀವ್ರ ಸ್ಕ್ರೀನಿಂಗ್ ಡ್ರೈವ್‍ನಲ್ಲಿ ಭಾಗವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿನಂತಿಸಿದ್ದಾರೆ.

              ರೋಗಲಕ್ಷಣಗಳು ಮತ್ತು ರೋಗಿಗಳೊಂದಿಗೆ ಸಂಪರ್ಕದಲ್ಲಿರುವವರು ಪರೀಕ್ಷೆಗೆ ಹಾಜರಾಗಬೇಕು. ಎರಡು ದಿನಗಳಲ್ಲಿ 3.75 ಲಕ್ಷ ಪರೀಕ್ಷೆಗಳನ್ನು ನಡೆಸಲು ಗುರಿ ಇರಿಸಲಾಗಿದೆ. ಈಗಿರುವ ಪರೀಕ್ಷಾ ಕೇಂದ್ರಗಳು ಮತ್ತು ಮೊಬೈಲ್ ಲ್ಯಾಬ್‍ಗಳಲ್ಲಿ ಪರೀಕ್ಷೆಯನ್ನು ಮಾಡಬಹುದು.

           ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುವ ಪರೀಕ್ಷಾ ಶಿಬಿರಗಳಿಗೆ ಹಾಜರಾಗಬಹುದು. ಜಿಲ್ಲಾ ವೈದ್ಯಕೀಯ ಅಧಿಕಾರಿಗಳು ಪರೀಕ್ಷೆಗಳಿಗೆ ವ್ಯವಸ್ಥೆ ಮಾಡಿದ್ದಾರೆ. ಯಾವುದೇ ಪ್ರಶ್ನೆಗಳಿದ್ದಲ್ಲಿ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಅಥವಾ ದಿಶಾ 104 ಮತ್ತು 1056 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಚಿವರು ಹೇಳಿದರು.


            ಕೋವಿಡ್ ಧನಾತ್ಮಕವಾಗಿರುವವರನ್ನು ಆದಷ್ಟು ಬೇಗ ಗುರುತಿಸಲು ಮತ್ತು ರೋಗದ ಹರಡುವಿಕೆಯನ್ನು ಕಡಿಮೆ ಮಾಡಲು ಹಾಗೂ ಕೋವಿಡ್ ಪೂರ್ವ ಸಾಮಾನ್ಯ ಜೀವನಕ್ಕೆ ಮರಳಲು ತೀವ್ರವಾದ ತಪಾಸಣೆ ನಡೆಸಲಾಗುತ್ತಿದೆ. ಆಂಟಿಜೆನ್, ಆರ್ಟಿಪಿಸಿಆರ್. ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

          ಕೋವಿಡ್ ಬಾಧಿಸದಂತೆ ನೋಡಿಕೊಳ್ಳಲು ಉಸಿರಾಟ ಮತ್ತು ಗಂಭೀರ ಕಾಯಿಲೆ ಇರುವ ಎಲ್ಲರನ್ನು ಪರೀಕ್ಷಿಸಬೇಕು. ಅಂತಹ ಜನರು ಕೋವಿಡ್ ಸೋಂಕಿನಿಂದ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುವುದರಿಂದ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಎಚ್ಚರಿಸಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries