ತಿರುವನಂತಪುರ: ಮಾಸ್ಕ್ ನಿಂದ ಮುಖ ಒರೆಸಿದ ಘಟನೆಯ ಬಗ್ಗೆ ಆಲಪ್ಪುಳ ಶಾಸಕ ಪಿ.ಪಿ.ಚಿತ್ತರಂಜನ್ ವಿವರಣೆ ನೀಡಿ ಸ್ತಃ ಖೇದ ವ್ಯಕ್ತಪಡಿಸಿರುವರು. ತನ್ನ ಇಂತಹ ಕ್ರಿಯೆ ತಪ್ಪು ಎಂದು ಚಿತ್ತರಂಜನ್ ಒಪ್ಪಿಕೊಂಡಿದ್ದು ತನ್ನೀ ಕ್ರಮದಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದೆ ಎಂದು ವಿಷಾದ ವ್ಯಕ್ತಪಡಿಸಿರುವರು. ಮುಖ ಒರೆಸಲು ತಾನು ಬಳಸಿದ ಮಾಸ್ಕ್ ನ್ನು ರಕ್ಷಣಾತ್ಮಕವಾಗಿ ಬಳಸಿರಲಿಲ್ಲ ಮತ್ತು ದೃಶ್ಯದ ಹರಡುವಿಕೆಗೆ ವಿಷಾದಿಸುತ್ತೇನೆ ಎಂದು ಚಿತ್ತರಂಜನ್ ಹೇಳಿದ್ದಾರೆ.
ಬುಧವಾರ(ನಿನ್ನೆ) ಮೀಡಿಯಾ ಒನ್ ಚಾನೆಲ್ ನಲ್ಲಿ ನಡೆದ ಚರ್ಚೆಯ ವೇಳೆ ಈ ಘಟನೆ ನಡೆದಿದೆ. ಚರ್ಚೆ ಮುಂದುವರೆದಂತೆ ಶಾಸಕ ಮಾಸ್ಕ್ ನಿಂದ ಮುಖ ಒರೆಸುತ್ತಿರುವುದು ಕಂಡುಬಂತು. ಆದರೆ, ಚರ್ಚೆಗೆ ತಡವಾಗಿ ಬಂದಿದ್ದೇನೆ ಮತ್ತು ಮುಖ ತೊಳೆಯಲು ಸಮಯಾವಕಾಶವಿರಲಿಲ್ಲ. ಆದ್ದರಿಂದ ಕೈಯಲ್ಲಿದ್ದ ಹೆಚ್ಚುವರಿ ಓ 95 ಮಾಸ್ಕ್ ನಿಂದ ಮುಖವನ್ನು ಒರೆಸಿದೆ ಎಂದು ಶಾಸಕರು ಸಮಜಾಯಿಷಿ ನೀಡಿರುವರು.
ಈ ಬಗ್ಗೆ ಶಾಸಕರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ:
ತನ್ನಿಂದ ತಪ್ಪಾಗಿದೆ ಕ್ಷಮಿಸಿ.......
ಮೀಡಿಯಾ ಒನ್ ಚಾನೆಲ್‍ನಲ್ಲಿ ನಡೆದ ಚರ್ಚೆಯ ವೇಳೆ ಮಾಸ್ಕ್ ನಿಂದ ಮುಖ ಒರೆಸುವ ಚಿತ್ರ ಮತ್ತು ದೃಶ್ಯ ವ್ಯಾಪಕವಾಗಿ ಪ್ರಸಾರವಾಗಿದೆ. ಅದು ನಾನು ಮಾಡಿದ ತಪ್ಪು. ನಾನು ನಿನ್ನೆ ಡಬಲ್ ಸರ್ಜಿಕಲ್ ಮಾಸ್ಕ್ ಧರಿಸಿದ್ದೆ.
ನಾನು ನಿನ್ನೆ ಸಂಜೆ ಆಲಪ್ಪುಳದಿಂದ ತಿರುವನಂತಪುರಂಗೆ ಹೋಗಬೇಕಾಗಿತ್ತು. ಚಾನೆಲ್ ತಿರುವನಂತಪುರದ ಮೀಡಿಯಾ ಒನ್ ಸ್ಟುಡಿಯೊಕ್ಕೆ ಚರ್ಚೆಗೆ ತಲುಪಬೇಕಿತ್ತು. ರೈಲು ವಿಳಂಬದಿಂದಾಗಿ ಚರ್ಚೆ ಪ್ರಾರಂಭವಾದ 15 ನಿಮಿಷಗಳ ನಂತರ ನಾನು ಚರ್ಚೆಗೆ ತಲಪಿದೆ. ವೇಗವಾಗಿ ಮೆಟ್ಟಿಲುಗಳನ್ನು ಹತ್ತಿದಾಗ ಬೆವರುವುದು ಸಹಜ. ಆದರೆ ತನ್ನಲ್ಲಿರುವ ಹೆಚ್ಚುವರಿ ಮಾಸ್ಕ್ ನಿಂದ ಮುಖ ಒರೆಸಿದೆ. ಆದರೆ ತಾನು ಹಾಗೆ ಮಾಡಬಾರದಿತ್ತು. ಪ್ರಮಾದಕ್ಕೆ ವಿಷಾದಗಳು ಎಂದವರು ಮುಖ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.





