HEALTH TIPS

ವಿಶ್ವ ಯುವ ಕೌಶಲ ದಿನ: ಏನಿದರ ವಿಶೇಷ? ಆಚರಣೆ ಯಾಕೆ?

             ನವದೆಹಲಿ:  ಯುವಜನತೆಯಲ್ಲಿ ಕೌಶಲ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಕೌಶಲದ ಪ್ರಾಮುಖ್ಯತೆಯನ್ನು ಸಾರುವ ಉದ್ದೇಶದಿಂದ ವಿಶ್ವ ಸಂಸ್ಥೆ ಜುಲೈ 15 ಅನ್ನು ವಿಶ್ವ ಯುವ ಕೌಶಲ ದಿನವನ್ನಾಗಿ ಆಚರಿಸುತ್ತದೆ.

          ವೃತ್ತಿ, ಜೀವನ ಕೌಶಲ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಕೌಶಲವನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಮತ್ತು ಕೌಶಲದ ಪ್ರಯೋಜನವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಕೌಶಲ ದಿನ ಹೆಚ್ಚು ಮಹತ್ವದ್ದಾಗಿದೆ.

         ಉದ್ಯೋಗದಾತರು, ಉದ್ಯಮ ಮತ್ತು ಉದ್ಯೋಗ ಬಯಸುವವರು ಹೀಗೆ ಸಮಾಜದ ವಿವಿಧ ಹಂತಗಳಲ್ಲಿ ತರಬೇತಿ ಮತ್ತು ನೈಪುಣ್ಯತೆ ಸಾಧಿಸುವಂತೆ ಯುವಜನತೆಯನ್ನು ಪ್ರೇರೇಪಿಸಲಾಗುತ್ತದೆ.

           ವಿಶ್ವಸಂಸ್ಥೆ ಘೋಷಣೆ

       2014ರಲ್ಲಿ ಜುಲೈ 15ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ವಿಶ್ವ ಯುವ ಕೌಶಲ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಪ್ರತಿ ವರ್ಷವೂ ಕೌಶಲ ದಿನ ಆಚರಿಸಲಾಗುತ್ತದೆ.

        2030ರ ವೇಳೆಗೆ ಎಲ್ಲ ವರ್ಗದವರಿಗೂ ಸಂಪೂರ್ಣ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಕೌಶಲ, ಒದಗಿಸುವ ಗುರಿಯನ್ನು ವಿಶ್ವಸಂಸ್ಥೆ ಹೊಂದಿದೆ.

           ಸದಸ್ಯ ರಾಷ್ಟ್ರಗಳಿಗೆ ನಿರ್ದೇಶನ

         ಸದಸ್ಯ ರಾಷ್ಟ್ರಗಳು ಈ ಗುರಿಯನ್ನು ಸಾಧಿಸಲು ಕೈಜೋಡಿಸಬೇಕು ಮತ್ತು ಯುವಜನತೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ವಿಶ್ವಸಂಸ್ಥೆ ಕೋರಿಕೊಂಡಿದೆ.

            ಅಲ್ಲದೆ, ಲಿಂಗ ಅಸಮಾನತೆಯನ್ನು ತೊಡೆದು ಹಾಕುವುದು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು, ಕೌಶಲ ಯೋಜನೆಯ ಸಮರ್ಪಕ ಜಾರಿಯಂತಹ ವಿವಿಧ ಕ್ರಮಗಳನ್ನು ಯುವ ಕೌಶಲ ದಿನದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ.

             ದೇಶದಲ್ಲಿ ವಿವಿಧ ಯೋಜನೆ

        ಅಲ್ಲದೆ, ದೇಶದಲ್ಲಿ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೌಶಲ ಅಭಿವೃದ್ದಿ ತರಬೇತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಣದ ಜತೆಗೆ ಉದ್ಯೋಗ ಲಭಿಸಲು ಕೌಶಲದ ಅಗತ್ಯತೆ, ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿಶ್ವ ಸಂಸ್ಥೆಯ ನಿರ್ದೇಶನದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries