ಕಾಸರಗೋಡು: ಕಾಸರಗೋಡು ಪ್ರವಾಸೋದ್ಯಮ ಸಾಮಥ್ರ್ಯವನ್ನು ವಿಶ್ವದ ಮುಂಚೂಣಿಗೆ ತರಲು 'ಲಿಟಲ್ ಇಂಡಿಯಾ ಕಾಸರಗೋಡು' ಪ್ರವಾಸೋದ್ಯಮ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಹೇಳಿದರು.
ಆನ್‍ಲೈನ್‍ನಲ್ಲಿ ಬೇಕಲ ಲಲಿತ್ ರೆಸಾರ್ಟ್‍ನಲ್ಲಿ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ ನೇತೃತ್ವದಲ್ಲಿ 'ಲಿಟಲ್ ಇಂಡಿಯಾ ಕಾಸರಗೋಡು' ಪ್ರವಾಸೋದ್ಯಮ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಬಹುಭಾಷಾ ಸಂಸ್ಕøತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದ ಸಮೃದ್ಧವಾಗಿರುವ ಕಾಸರಗೋಡು ಭಾರತದ ಎಲ್ಲಾ ಹಬ್ಬಗಳನ್ನು ಸಮಾನವಾಗಿ ಆಚರಿಸುವ ಸಮುದಾಯವಾಗಿದೆ ಎಂದು ಸಚಿವರು ಹೇಳಿದರು. ಬೇರೆ ಯಾವ ರಾಜ್ಯಗಳಾಗಲಿ, ಜಿಲ್ಲೆಗಳಾಗಲಿ ಅಂತಹ ವೈವಿಧ್ಯತೆಯನ್ನು ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಈ ಯೋಜನೆಯನ್ನು 'ಲಿಟಲ್ ಇಂಡಿಯಾ ಕಾಸರಗೋಡು' ಎಂದು ಕರೆಯಲಾಗುತ್ತದೆ. ಭಾಷೆ ಎಂದರೆ ಜನರ ಸಂಸ್ಕೃತಿ. 12 ಭಾಷೆಗಳು ಸೇರಿದಂತೆ 30 ಸ್ಥಳೀಯ ಭಾಷೆಗಳನ್ನು ಮಾತನಾಡುವ ಜನರ ಸಾಂಸ್ಕೃತಿಕ ವೈವಿಧ್ಯತೆ ಎಷ್ಟು ಭಿನ್ನವಾಗಿದೆ? ಈ ಯೋಜನೆಯು ಎಲ್ಲಾ ಹಂತಗಳಿಗೂ ಸೂಕ್ತವಾಗಿದೆ. ಕಾಸರಗೋಡಿನ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯ, ಇತಿಹಾಸ ಮತ್ತು ಸಂಸ್ಕೃತಿಯನ್ನು ಸಂಯೋಜಿಸುವ ರೀತಿಯಲ್ಲಿ ಸ್ಥಳೀಯ ಜನರನ್ನು ಸೇರಿಸುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಲಿಟಲ್ ಇಂಡಿಯಾ ಕಾಸರಗೋಡು ಹೊಂದಿದೆ. ಆಕರ್ಷಕ ಪ್ರವಾಸಿ ತಾಣಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಿ ಜಿಲ್ಲೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ನ್ಯಾಯವಾದಿ ಸಿಎಚ್ ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕರಾದ ರಾಜಗೋಪಾಲನ್, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾಧ್ಯಕ್ಷ ನ್ಯಾಯವಾದಿ ವಿ.ಎಂ. ಮುನೀರ್, ಕಾಞಂಗಾಡ್ ಮಹಾನಗರ ಪಾಲಿಕೆಯ ಅಧ್ಯಕ್ಷ ಕೆ.ವಿ.ಸುಜಾತಾ, ಉದುಮ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪಳ್ಳಿಕ್ಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಕುಮಾರನ್ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಥಾಮಸ್ ಆಂಟನಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಸ್ವಾಗತಿಸಿ, ಡಿಟಿಪಿಸಿ ಕಾರ್ಯದರ್ಶಿ ಬಿಜುರಾಘವನ್ ವಂದಿಸಿದರು.

