ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕಾಞಂಗಾಡ್ ನ ರೋಟರಿ ಕ್ಲಬ್ ನೇತೃತ್ವದಲ್ಲಿ ಅಧ್ಯಕ್ಷ ಸಂದೀಪ್ ಜೋಸ್ ಹಾಗು ಕಾಞಂಗಾಡ್ ನ ಪ್ರಸಿದ್ಧ ಪ್ರಸೂತಿ ತಜ್ಞ ರಾಘವೇಂದ್ರ ಪ್ರಸಾದ್, ರೋಟರಿಯನ್ ಪ್ರದೀಪ್ ಮತ್ತಿತರರು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕುಂಟಾರು ಅವರ ದಿವ್ಯ ಉಪಸ್ಥಿತಿಯಲ್ಲಿ ಮುಳ್ಳೇರಿಯಾದ ಗಣೇಶ ಕಲಾಮಂದಿರದಲ್ಲಿ ಕಾರಡ್ಕದ ಎಂಡೋಸಲ್ಫಾನ್ ಪೀಡೀತ ಫಲಾನುಭವಿಗಳಿಗೆ ಸಹಾಯಧನ ಹಾಗು ಆಹಾರ ಧಾನ್ಯಗಳ ಕಿಟ್ ಅನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾರಡ್ಕ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ. ಗೋಪಾಲಕೃಷ್ಣ ಸಹಿತ ಪಂಚಾಯತಿ ಸದಸ್ಯರು, ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.


